ಗುರುಮಠಕಲ್ ನಲ್ಲಿ 113 ಕೋಟಿ ರೂ. ಅನುದಾನದಲ್ಲಿ 42 ವಿವಿಧ ಕಾಮಗಾರಿಗಳಿಗೆ ಚಾಲನೆ

ಯಾದಗಿರಿ: ಅಧಿಕಾರ ಇರಲಿ, ಬಿಡಲಿ ಸಾಯುವವರೆಗೂ ಗುರುಮಠಕಲ್ ಕ್ಷೇತ್ರದ ಜನರ ಕಷ್ಟ, ಸುಖಗಳಲ್ಲಿ ಭಾಗಿಯಾಗುತ್ತೇನೆ. ಮುಂದಿನ ಎರಡುವರೆ ವರ್ಷಗಳಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುವ ಸಂಕ್ಪಲ ನನ್ನದು ಎಂದರು.
ಸೋಮವಾರ ಗುರುಮಠಕಲ್ ಪಟ್ಟಣದಲ್ಲಿ 113 ಕೋಟಿ ರೂ. ವೆಚ್ಚದ ವಿವಿಧ ಇಲಾಖೆಗಳ ಒಟ್ಟು 42 ಕಾಮಗಾರಿಗಳಿಗೆ ಚಾಲನೆ ಮತ್ತು ಉದ್ಘಾಟನೆಗಾಗಿ ಆಯೋಜಿಸಿದ್ಧ ಬೃಹತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದುವರೆಗೂ ಮಾಡಿರುವ ಅಭಿವೃದ್ಧಿ ಕೆಲಸಗಳು ಕೇವಲ ಟ್ರೈಲರ್ ಅಷ್ಟೆ, ಇನ್ನೂ ಪೀಕ್ಚರ್ ಬಾಕಿ ಇದ್ದು, ಮುಂದಿನ ವರ್ಷದಿಂದ ಅಭಿವೃದ್ಧಿಗೆ ನಾಗಲೋಟದ ವೇಗ ನೀಡಲಾಗುವುದೆಂದರು.
ಈ ವೇಳೆ ಇಲಾಖಾವಾರು ಕಾಮಗಾರಿಗಳ ಚಾಲನೆ ಮತ್ತು ಉದ್ಘಾಟನೆ ಬಗ್ಗೆ ಶಾಸಕರು ವಿವರವಾಗಿ ತಿಳಿಸಿದರು.
ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿದರು.
ಇಂದಿನ ಈ ಬಹುದೊಡ್ಡ ಕಾರ್ಯಕ್ರಮಕ್ಕೆ ಕೆಲವು ವಿರೋಧಿಗಳು ಅಡಚಣೆ ಮಾಡಿದ್ದರು. ಆದರೇ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರ ಸಹಕಾರ ಮತ್ತು ಎಲ್ಲ ಇಲಾಖೆಗಳ ಅಧಿಕಾರಿಗಳ ಪ್ರಯತ್ನದಿಂದ ಯಶಸ್ಸಿಯಾಗಿದೆ.
-ಶಾಸಕ ಕಂದಕೂರ
ಹಕ್ಕುಪತ್ರ ವಿತರಣೆ :
ಕೊಳಗೇರಿ ಇಲಾಖೆಯಿಂದ 200 ಮನೆಗಳ ಪೈಕಿ ಸಾಂಕೇತಿಕವಾಗಿ ಐವರಿಗೆ ಮನೆಗಳ ಹಕ್ಕುಪತ್ರ ವಿತರಿಸಲಾಯಿತು. ಕಾರ್ಮಿಕ ಇಲಾಖೆಯಿಂದ ವಿವಿಧ ತರಹದ ಮಷಿನ್‌ಗಳ ವಿತರಣೆ ನಡೆಯಿತು.
ಭೂಮಿ ಪೂಜೆ :
ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹಾಗೂ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ, ನಿಯಮಿತ ಇವರ ಸಂಯುಕ್ತಾಶ್ರಯದಲ್ಲಿ 2.16 ಕೋಟಿ ರೂ. ವೆಚ್ಚದಲ್ಲಿ ಗುರುಮಠಕಲ್ ತಾಲೂಕಿನಲ್ಲಿ ಮೂರು ಅಗ್ನಿಶಾಮಕ ಠಾಣೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.







