ಕೆಂಭಾವಿಯಲ್ಲಿ ವಿಜೃಂಭಣೆಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕೆಂಭಾವಿ: ದೇಶಾದ್ಯಂತ 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದ್ದು, ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಶಫೀಕ್ ದಫೆದಾರ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ–ಬಲಿದಾನಗಳು ಪ್ರತಿಯೊಬ್ಬರಿಗೂ ಸದಾ ಪ್ರೇರಣೆಯಾಗಿವೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶದ ಏಕತೆ ಹಾಗೂ ಸಮಗ್ರತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಮಹಿಪಾಲ್ ರೆಡ್ಡಿ ದಿಗ್ಗಾವಿ, ಪುರಸಭೆ ಸದಸ್ಯ ಆರೀಫ್ ಹುಸೇನ್ ಖಾಜಿ, ರವಿಶಂಕರ್ ಸೊನ್ನದ, ಆದಿತ್ಯ ಗೌಡ ಪಾಟೀಲ್, ಬೀ ಝಡ್ ನಾಲತವಾಡ, ರಾಘವೇಂದ್ರ ದೇಶಪಾಂಡೆ, ಸೋಫಿ ನಾಸಿ, ಬಂದೆನವಾಜ್ ನಾಲತವಾಡ, ಪವನ್ ಕುಲ್ಕರ್ಣಿ, ನಯುಮ್ ಖಾಜಿ, ಅಲ್ಲಾಭಕ್ಷ್ ಹುಳಬುತ್ತಿ, ಬಷೀರ್ ನಾಸಿ, ಬಾಬಾ ತಾಳಿಕೋಟಿ, ಜಿಲಾನಿ ನಾಸಿ ಹಾಗೂ ಅನೇಕ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.




