ಅಕ್ಕಮಹಾದೇವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸ್ತ್ರೀ ಕುಲಕ್ಕೆ ಮಾದರಿ: ಜಯಲಲಿತಾ

ಸುರಪುರ: ಪ್ರಥಮ ವಚನಕಾರ್ತಿ ಅಕ್ಕಮಹಾದೇವಿ ಹಾಗೂ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಸ್ತ್ರೀ ಕುಲಕ್ಕೆ ಮಾದರಿಯಾಗಿದ್ದಾರೆ,ಇವರ ಕೊಡುಗೆ ಎಲ್ಲಾ ಮಹಿಳೆಯರಿಗೂ ಮಾದರಿಯಾಗಿದೆ ಎಂದು ಹಿರಿಯ ನ್ಯಾಯವಾದಿ ಜಯಲಲಿತಾ ಪಾಟಿಲ್ ಹೇಳಿದರು.
ರಂಗಂಪೇಟೆಯ ಬಸವಪ್ರಭು ತರಬೇತಿ ಕೇಂದ್ರದಲ್ಲಿ ಅಕ್ಕಮಹಾದೇವಿ ಮಹಿಳಾ ಸಹಕಾರಿ ಸಂಘದ ವತಿಯಿಂದ ಆಯೋಜನೆ ಮಾಡಲಾಗಿದ್ದ ಅಕ್ಕಮಹಾದೇವಿ ಜಯಂತಿ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವಿಶ್ವದ ಪ್ರಥಮ ಕವಯತ್ರಿ ಮತ್ತು ವಚನಕಾರ್ತಿ ಅಕ್ಕಮಹಾದೇವಿ ವೈರಾಗ್ಯದ ತವನಿಧಿಯಾಗಿದ್ದಾಳೆ. ಪ್ರಥಮ ಮಹಿಳಾ ವಚನಕಾರ್ತಿಯಾಗಿ ಚನ್ನಮಲ್ಲಿಕಾರ್ಜುನ ಅಂಕಿತನಾಮದೊಂದಿಗೆ ಅನುಭವ ಮಂಟಪದಲ್ಲಿ ಮಹಿಳಾ ವಚನಕಾರರನ್ನು ಒಗ್ಗೂಡಿಸಿದ ಕೀರ್ತಿ ಇವರಿಗ ಸಲ್ಲುತ್ತದೆ. ಹಾಗೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಅವರು ಕುಟುಂಬದೊಂದಿಗೆ ಇದ್ದು ಎಲ್ಲಾ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ಮನೆಯ ಮೈದುನ ವೇಮನನ ಬದಲಾಯಿಸಿ ಶರಣನನ್ನಾಗಿಸಿ ಸಮಾಜಕ್ಕೆ ಸಂದೇಶ ಸಾರಿದ್ದಾರೆ ಹಾಗೂ ರೆಡ್ಡಿ ಸಮಾಜದ ಒಳಿತಿಗಾಗಿ ಪ್ರಾರ್ಥಿಸಿದ್ದಾರೆ. ಇರ್ವರು ಮಹಿಳಾ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು,
ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದ ನಿವೃತ್ತ ಪ್ರಾಂಶುಪಾಲರಾದ ಸುವರ್ಣ ಅರ್ಜುನಗಿ ಮಾತನಾಡಿ, ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದು ಅಧ್ಯಯನ,ಅಧ್ಯಾಪನ,ವೃತ್ತಿ ಕೌಶಲ್ಯ ಎಲ್ಲವನ್ನು ಬೆಳೆಸಿಕೊಂಡಿದ್ದಾರೆ, ಮುಂದಿನ ದಿನಗಳಲ್ಲಿ ಶಿವಶರಣರ ಬದುಕಿನ ತತ್ವ ಸಿದ್ಧಾಂತಗಳನ್ನು ನಿಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಸಾರ್ಥಕವಾಗುತ್ತದೆ ಎಂದರು.
ಜಿಲ್ಲಾ ಸಹಕಾರಿ ಒಕ್ಕೂಟ ಯೂನಿಯನ್ ನಿರ್ದೇಶಕ ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಾಸ್ಥಾವಿಕವಾಗಿ ಕಾರ್ಯಕ್ರಮದ ಕುರಿತು ಮಾತನಾಡಿದರು, ವೇದಿಕೆ ಮೇಲೆ ಅಕ್ಕಮಹಾದೇವಿ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾದ ಚನ್ನಮ್ಮ ಅಂಗಡಿ, ಉಪಾಧ್ಯಕ್ಷರಾದ ನೀಲಾಂಬಿಕೆ ಪೊಲೀಸ್ ಪಾಟೀಲ್, ತರಬೇತಿ ಕೇಂದ್ರದ ಶಿಕ್ಷಕರಾದ ರೇಷ್ಮಾ, ನಫೀಸ ಮುಖಂಡರಾದ ಶಿವಶರಣಪ್ಪ ಹೆಡಗಿನಾಳ, ಮಹೇಶ್ ಪಾಟೀಲ್, ಹನುಮಂತರಾಯ ದೇವತ್ಕಲ್ ಸಿದ್ದಪ್ರಸಾದ ಪಾಟೀಲ್ ಇತರರಿದ್ದರು.
ಕಾರ್ಯಕ್ರಮವನ್ನು ಮರಿಯ ರುಕ್ಸರ್ ನಿರೂಪಿಸಿದರು, ಶಿಲ್ಪ ಪ್ರಾರ್ಥಿಸಿದರು, ಅಂಜುಂ ಸ್ವಾಗತಿಸಿದ ವಂದಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ ಭಾಷಣ ಸ್ಪರ್ಧೆ ಪ್ರಬಂಧ ಸ್ಪರ್ಧೆ ವಚನ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಬಹುಮಾನ ವಿತರಿಸಲಾಯಿತು.







