ಯಾದಗಿರಿ: ಅಕ್ರಮ ಕಲ್ಲು ಗಣಿಗಾರಿಕೆ ತಡೆಗಟ್ಟಲು ಕರವೇ ಮನವಿ

ಯಾದಗಿರಿ: ಅಕ್ರಮ ಕಲ್ಲು ಗಣಿಗಾರಿಕೆ ತಡೆಗಟ್ಟುವಂತೆ ಕರವೇ ಜಿಲ್ಲಾ ಘಟಕ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಹಿರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಕರವೇ ಜಿಲ್ಲಾಧ್ಯಕ್ಷರಾದ ಟಿ.ಎನ್. ಭೀಮುನಾಯಕ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಅವರು, ಯಾದಗಿರಿ ಜಿಲ್ಲೆ ಶಹಾಪೂರ ತಾಲೂಕಿನ ಶಿರವಾಳ ಅಣಬಿ, ಹೊಸೂರು, ದೋರನಹಳ್ಳಿ ಗ್ರಾಮಗಳಲ್ಲಿ ನಿರಂತರವಾಗಿ ಹಲವು ವರ್ಷಗಳಿಂದ ಅಕ್ರಮ ಕಲ್ಲು ಗಣಿಗಾರಿಕೆ ಮಾಡಲಾಗುತ್ತಿದ್ದು, ಗಣಿಗಾರಿಕೆ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ, ಕೃಷಿ ಜಮೀನಿನಲ್ಲಿ ಕಾನೂನು ಬಾಹಿರವಾಗಿ ಯಾವುದೇ ಸಂಬಂಧಪಟ್ಟ ಇಲಾಖೆಯ ಪರವಾನಿಗೆ ಇಲ್ಲದೇ ರಾಜಾ-ರೋಷವಾಗಿ ಹಗಲು ರಾತ್ರಿ ಎನ್ನದೇ ಕಲ್ಲು ಗಣಿಗಾರಿಕೆ, ಬ್ಲಾಸ್ಟಿಂಗ್ ಕೆಲಸ ನಡೆಯುತ್ತಿದೆ. 100 ಕ್ಕೂ ಹೆಚ್ಚು ಅಡಿಯಷ್ಟು ಆಳ ತೋಡಿರುತ್ತಾರೆ. ನೂರಾರು ಎಕರೆ ವಿಶಾಲವಾಗಿ ನಡೆಸಿ, ಅಕ್ರಮ ದಂಧೆ ಮಾಡಿಕೊಂಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ಅಕ್ಕ-ಪಕ್ಕದ ಕೃಷಿ ಚಟುವಟಿಕೆ ಮಾಡುವ ರೈತರಿಗೆ ತೀವ್ರ ಅಡಚಣೆ ಉಂಟಾಗುತ್ತಿದ್ದು, ಹಾಗೂ ಭಯದಲ್ಲಿ ವಾಸಿಸುತ್ತಿದ್ದು, ಈ ಪ್ರದೇಶದ ಪಕ್ಕದಲ್ಲಿ ಸನ್ನತಿ ಬ್ರಿಡ್ಜ್ ಇದ್ದು, ಬ್ಲಾಸ್ಟಿಂಗ್‌ನಿಂದ ಸೇತುವೆಗೆ ಹಾಗೂ ಗ್ರಾಮದಲ್ಲಿರುವ ಮನೆಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ರಸ್ತೆ ಅಕ್ಕ-ಪಕ್ಕ ದೊಡ್ಡ ಗುಂಡಿಗಳು ಬಿದ್ದಿದ್ದರಿಂದ ರಸ್ತೆ ಮೂಲಕ ವಾಹನ ಸಂಚಾರಿ ವ್ಯವಸ್ಥೆಗೆ ಕೂಡಾ ತೊಂದರೆ ಆಗಿದೆ. ಈ ಬಗ್ಗೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಅಕ್ರಮದಾರರು ಕೃಷಿ ಭೂಮಿಯಲ್ಲಿ ಕಲ್ಲು ಗಣಿಗಾರಿಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಇರುತ್ತದೆ. ಈ ಅಕ್ರಮದಲ್ಲಿ ಕಂದಾಯ, ಪೊಲೀಸ್, ಗಣಿಗಾರಿಕೆ ಇಲಾಖೆಯವರಿಗೆ ಮಾಹಿತಿ ಇದ್ದರೂ ಕೂಡಾ ಕ್ರಮಕ್ಕೆ ಮುಂದಾಗಿಲ್ಲ, ಇವರು ನೇರವಾಗಿ ಶಾಮೀಲಾಗಿರವುದು ಕಂಡುಬರುತ್ತದೆಂದು ಹೇಳಿದರು.
ಆದ ಕಾರಣ ತಾವು ಈ ಬಗ್ಗೆ ಕ್ರಮ ಕೈಗೊಂಡು ಅಕ್ರಮ ತಡೆಗಟ್ಟಿ, ಶಾಮೀಲಾದವರ ಮೇಲೆ ಕ್ರಮಕ್ಕೆ ಮುಂದಾಗಲು ಎಚ್ಚರಿಸಲಾಯಿತ್ತು.
ಒಂದು ವೇಳೆ ಕ್ರಮಕ್ಕೆ ಮುಂದಾಗದೇ ಹೋದಲ್ಲಿ ನಮ್ಮ ಸಂಘಟನೆ ವತಿಯಿಂದ ಅಕ್ರಮ ಗಣಿಗಾರಿಕೆ ನಡೆಯುವಂತ ಸ್ಥಳಗಳಿಗೆ ಮುತ್ತಿಗೆ ಹಾಕಿ ಪರಿಸರವನ್ನು ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳಲು ಮುಂದಾಗಬೇಕಾಗುತ್ತದೆ. ಮತ್ತು ಇಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಸಂಬಂಧಪಟ್ಟ ಅಧಿಕಾರಿಗಳೆ ನೇರ ಹೊಣೆಗಾರೆರು ಆಗುತ್ತಾರೆಂದು ತಮ್ಮ ಗಮನಕ್ಕೆ ತರುತ್ತಿದ್ದೇವೆಂದು ತಿಳಿಸಿದರು.
ಈ ಸಂಧರ್ಭದಲ್ಲಿ ಕರವೇ ಮುಖಂಡರಾದ ಸಿದ್ದುನಾಯಕ ಹತ್ತಿಕುಣಿ, ಚೌಡಯ್ಯ ಬಾವೂರ, ಸಾಹೇಬಗೌಡನಾಯಕ, ಯಮನಯ್ಯ ಗುತ್ತೇದಾರ, ಪ್ರಕಾಶ ಪಾಟೀಲ ಜೈಗ್ರಾಮ್, ಸಿದ್ದಪ್ಪ ಕೂಯಿಲೂರ, ಸಿದ್ದಪ್ಪ ಕ್ಯಾಸಪನಳ್ಳಿ, ಅಬ್ದುಲ ಚಿಗನೂರ, ಶರಣಬಸಪ್ಪ ಯಲ್ಹೇರಿ, ವಿಶ್ವರಾಜ ಪಾಟೀಲ ಹೊನಗೇರಾ, ಸುರೇಶ ಬೆಳಗುಂದಿ, ಬಸ್ಸುನಾಯಕ ಸೈದಾಪೂರ, ಸುಭಾಷ ಯರಗೊಳ, ಲಿಂಗಾರಾಜ ವಡವಟ್, ಸೈದಪ್ಪ ಬಾಂಬೆ, ಮೌನೇಶ ಮಾಧ್ವಾರ, ಸಾಗರ ಹುಲ್ಲೇರ್, ಮಹೇಶ ಸೈದಾಪೂರ, ಮಲ್ಲು ಕೊಲ್ಕರ್, ರಮೇಶ.ಡಿ.ನಾಯಕ ಉಮೇಶ ಕಿಲ್ಲನಕೇರಾ, ಹಾಗೂ ಅನೇಕ ಕಾರ್ಯಕರ್ತರರು ಭಾಗಿಯಾಗಿದ್ದರು.







