ಸುರಪುರ | ಕೆನರಾ ಬ್ಯಾಂಕ್ ಶಾಖೆಗೆ ಫಿಲ್ಡ್ ಅಧಿಕಾರಿಯನ್ನು ನೇಮಿಸಿ : ವೆಂಕಟೇಶ ನಾಯಕ ಒತ್ತಾಯ

ಸುರಪುರ: ನಗರದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಇನ್ನೊರ್ವ ಕೃಷಿ ಕಾರ್ಯನಿರ್ವಾಹಕ ಅಧಿಕಾರಿ (ಫಿಲ್ಡ್ ಆಫಿಸರ್ ) ನೇಮಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ಒತ್ತಾಯಿಸಿದ್ದಾರೆ.
ಈ ಕುರಿತು ಕೆನರಾ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕರು ಪ್ರಾದೇಶಿಕ ಕಚೇರಿ ರಾಯಚೂರು ಅವರಿಗೆ ಪತ್ರ ಬರೆದು, ಸುರಪುರ ಶಾಖೆಯಲ್ಲಿ ಈಗ ಒಬ್ಬರೇ ಕೃಷಿ ಕಾರ್ಯನಿರ್ವಾಹಕ ಅಧಿಕಾರಿ ಇದ್ದು, ಈ ಶಾಖೆ ವ್ಯಾಪ್ತಿಗೆ ಶೇ.70ರಷ್ಟು ಗ್ರಾಮಗಳು ಒಳಪಟ್ಟಿದೆ. ನಿತ್ಯ ಬ್ಯಾಂಕ್ ಶಾಖೆಯ ಮುಂದೆ ನೂರಾರು ರೈತರು, ನೂರಾರು ಗ್ರಾಹಕರು ದಿನವಿಡೀ ಕಾಯುವ ಪರಿಸ್ಥಿತಿ ಉಂಟಾಗಿದೆ. ಈ ಸಮಸ್ಯೆ ಪರಿಹಾರವಾಗಲು ಶಾಖೆಯಲ್ಲಿ ಇನ್ನೊರ್ವ ಕೃಷಿ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸುವುದು ಅಗತ್ಯವಾಗಿದೆ ಎಂದರು.
ಇನ್ನೊರ್ವ ಫೀಲ್ಡ್ ಆಫೀಸರನ್ನು ನೇಮಕ ಮಾಡಿ ರೈತರಿಗೆ ಮತ್ತು ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕು, ಇಲ್ಲವಾದಲ್ಲಿ ಶಾಖೆಯ ಮುಂದೆ ರೈತರೊಂದಿಗೆ ಹಾಗೂ ಬ್ಯಾಂಕ್ ಗ್ರಾಹಕರೊಂದಿಗೆ ನಮ್ಮ ಸಂಘಟನೆ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.





