ಯಾದಗಿರಿ: ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಜಾಗೃತಿ ಕಾರ್ಯಕ್ರಮ

ಯಾದಗಿರಿ: ವಡಗೇರಾ ತಾಲ್ಲೂಕಿನ ಹಲ್ಗೇರಾ ಗ್ರಾಮದಲ್ಲಿ ಸೆಪ್ಟೆಂಬರ್ 29, 2025ರಂದು ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ ಸ್ಮೈಲ್ ಫೌಂಡೇಶನ್, MSD, ಯಾದಗಿರಿ ಹಾಗೂ ಆರೋಗ್ಯ ಇಲಾಖೆಯ ಜಂಟಿ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮ ಜರುಗಿತು. ಈ ವರ್ಷದ ಹೃದಯ ದಿನದ ಥೀಮ್ “ಒಂದು ಬೀಟ್ ಅನ್ನು ತಪ್ಪಿಸಿಕೊಳ್ಳಬೇಡಿ” ಎಂದು ಘೋಷಿಸಲಾಯಿತು.
ಹೃದಯ ನಾಳೀಯ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮದಲ್ಲಿ MSD–ಯಾದಗಿರಿಯ ಸ್ಮೈಲ್ ಫೌಂಡೇಶನ್ ವೈದ್ಯಾಧಿಕಾರಿ ಡಾ. ಯಲ್ಲಪ್ಪ ಕೃಷ್ಣಪ್ಪ ಆದಿನ್ ಅವರು ಹೃದಯವನ್ನು ಆರೈಕೆ ಮಾಡಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದರು.
ಕಾರ್ಯಕ್ರಮದಲ್ಲಿ ಹಲ್ಗೇರಾ ಗ್ರಾ.ಪಂ. ಅಧ್ಯಕ್ಷೆ ಮರಿಯಮ್ಮ ಯಲ್ಲಪ್ಪ, ಸಾಮಾಜಿಕ ಕಾರ್ಯಕರ್ತ ಯಲ್ಲಪ್ಪ ಹಲ್ಗೇರ, ಮೌನೇಶ ಪಾಟೀಲ, ಆರೋಗ್ಯ ಇಲಾಖೆ ಯೋಜನಾ ಸಮನ್ವಯಾಧಿಕಾರಿ ಅಬ್ದುಲ್ ಶಫೀ ಅಹ್ಮದ್, ಸ್ಮೈಲ್ ಫೌಂಡೇಶನ್‌ನ ನಾಗಮ್ಮ ಸಮುದಾಯ ಸಂಚಾಲಕಿ, ಎಎನ್‌ಎಂ ಕುಮಾರಿ ಅಶ್ವಿನಿ ಹಾಗೂ ಎಂ.ಎಸ್.ಡಿ.–ಸ್ಮೈಲ್ ಫೌಂಡೇಶನ್ ಪ್ರತಿನಿಧಿ ವಿನೋದ್ ಕುಮಾರ್ ಉಪಸ್ಥಿತರಿದ್ದರು.





