ಯಾದಗಿರಿ: ʼಬೇಟಿ ಬಚಾವೋ ಬೇಟಿ ಪಡಾವೋʼ ಕಾರ್ಯಕ್ರಮ
ಹೆಣ್ಣು ಎಂದು ಲಿಂಗ ತಾರತಮ್ಯ ಮಾಡುವುದು ಅಪರಾಧ: ಬಸವರಾಜ ಕೊಡೇಕಲ್

ಯಾದಗಿರಿ/ ಸುರಪುರ: ಯಾರಾದರೂ ಹೆಣ್ಣು ಮಗು ಎಂದು ಲಿಂಗ ತಾರತಮ್ಯ ಮಾಡಿದರೆ ಅದು ಕಾನೂನಿ ಪ್ರಕಾರ ಅಪರಾಧವಾಗಲಿದೆ ಎಂದು ಕೆಪಿಎಸ್ ಪ್ರಾಂಶುಪಾಲ ಬಸವರಾಜ ಕೊಡೇಕಲ್ ತಿಳಿಸಿದರು.
ನಗರದ ರಂಗಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ತಾಲೂಕ ಆಡಳಿತ,ತಾಲೂಕ ಪಂಚಾಯತ,ತಾಲೂಕ ಕಾನೂನು ಸೇವೆಗಳ ಪ್ರಾಧಿಕಾರ,ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ,ಪೊಲೀಸ್ ಇಲಾಖೆ,ಶಾಲಾ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ನಗರಸಭೆ,ಅರಣ್ಯ ಇಲಾಖೆ,ಕೆಪಿಎಸ್ ಶಾಲೆ ಇವರುಗಳ ಸಂಯುಕ್ತಾಶ್ರಯದಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ 10 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸಹಿ ಕ್ಯಾಂಪೇನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಮಹಿಳಾ ಸಬಲೀಕರಣ,ಮಹಿಳಾ ಶಿಕ್ಷಣ ಹಾಗೂ ಮಹಿಳಾ ಮೀಸಲಾತಿ ಕುರಿತು ಅನೇಕ ವಿಚಾರಗಳನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸುರೇಶ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆ ಮಾಡುವುದು ಅಪರಾಧವಾಗಿದೆ,ಅಲ್ಲದೆ ಸ್ಕಾö್ಯನಿಂಗ್ ಕೇಂದ್ರಗಳಲ್ಲಿ ಲಿಂಗತ್ವ ಪರೀಕ್ಷೆಯನ್ನು ನಿಷೇಧಿಸಲಾಗಿದೆ,ಇದನ್ನು ನಡೆಸಿದಲ್ಲಿ ಅಂತಹ ಕೇಂದ್ರಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಮಹಿಳಾ ಮೇಲ್ವಿಚಾರಕಿ ಶಶಿಕಲಾ ಗಾಳಿ ಪ್ರಾಸ್ತಾವಿಕವಾಗಿ ಮಾತನಾಡಿ,ಹೆಣ್ಣು ಭ್ರೂಣ ಹತ್ಯೆ ಮಹಾಅಪರಾಧವಾಗಿದೆ ಯಾರೂ ಭ್ರೂಣ ಹತ್ಯೆ ಮಾಡಬಾರದು,ಸರಕಾರ ಮಹಿಳಾ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಮಹಿಳೆಯರು ಮತ್ತು ಮಕ್ಕಳು ಈ ಯೋಜನೆಗಳ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು.
ಹಿರಿಯ ಮಹಿಳಾ ಮೇಲ್ವಿಚಾರಕಿ ಸಿದ್ದಮ್ಮ ಜಾನಕಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಶಾಲೆಯ ಉಪ ಪ್ರಾಂಶುಪಾಲ ಸಿದ್ದಣ್ಣ ಹೊಸಗೌಡರ್, ಅತಿಥಿಗಳಾಗಿ ಲಕ್ಷ್ಮೀಬಾಯಿ ಲಮಾಣಿ, ಶಾಂತಾ ಯಡ್ರಾಮಿ,ಶೋಭಾ ಸಜ್ಜನ್, ಚಂದ್ರಲೀಲಾ ಬಿಲ್ಲವ್, ಪದ್ಮಾವತಿ ಡಿ.ನಾಯಕ,ಕವಿತಾ ಬಡಿಗೇರ,ಭಾಗಮ್ಮ ಹೆಚ್.ಪಿ, ಸುನೀತಾ ಪಾಟೀಲ,ಎಪಿಎಫ್‌ನ ಸಂಪನ್ಮೂಲಕಾರ ಕವಿತಾ ವೇದಿಕೆಯಲ್ಲಿದ್ದರು. ಮಹಿಳಾ ಮೇಲ್ವಿಚಾರಕಿ ಸತ್ಯಮ್ಮ ನಿರೂಪಿಸಿದರು,ಕವಿತಾ ಬಡಿಗೇರ ವಂದಿಸಿದರು.ಶಾಲೆಯ ಎಲ್ಲಾ ಶಿಕ್ಷಕರು,ಅಂಗನವಾಡಿ ಆಶಾ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.







