ಯಾದಗಿರಿಯಲ್ಲಿ ಮಹಿಳೆಯರಿಗೆ ಸಿಹಿ ತಿನ್ನಿಸಿ ಶಕ್ತಿ ಯೋಜನೆಯ ಸಂಭ್ರಮಾಚರಣೆ

ಸುರಪುರ: ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡಿ ರಾಜ್ಯದ ಅಭಿವೃದ್ಧಿ ಮಾಡಿದ್ದಾರೆ. ಜನರು ನಮಗೆ ಮುಂದೆಯೂ ಬೆಂಬಲಿಸಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಬಸ್ ನಿಲ್ದಾಣದಲ್ಲಿ ಪಂಚ ಗ್ಯಾರಂಟಿಗಳಲ್ಲಿನ ಶಕ್ತಿ ಯೋಜನೆ ಅಡಿ ರಾಜ್ಯದಲ್ಲಿ 500 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರಕಾರದಂತೆ ಕ್ಷೇತ್ರದಲ್ಲೂ ನಿರಂತರವಾಗಿ ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತಿದ್ದು, ಜನರು ನಮಗೆ ಬೆಂಬಲಿಸುವ ಮೂಲಕ ಇನ್ನಷ್ಟು ಶಕ್ತಿ ಹೆಚ್ಚಿಸಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ಬಸ್‌ಗೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಿ ನಂತರ ಬಸ್‌ಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರಿಗೆ ಸಿಹಿ ನೀಡಿ ಸಂಭ್ರಮಾಚರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಹೀನಾಕೌಸರ್ ಶಕಿಲ್ ಅಹ್ಮದ್ ಖುರೇಷಿ, ಉಪಾಧ್ಯಕ್ಷ ರಾಜಾ ಪಿಡ್ಡನಾಯಕ (ತಾತಾ), ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಭೀರಲಿಂಗ ಬಾದ್ಯಾಪುರ, ಕೃಷ್ಣಾ ಜಾಧವ್, ನಯೋಪ್ರಾ ಅಧ್ಯಕ್ಷ ಪ್ರಕಾಶ ಗುತ್ತೇದಾರ, ಮುಖಂಡರಾದ ರಮೇಶ ದೊರೆ ಆಲ್ದಾಳ, ಅಬ್ದುಲಗಫೂರ ನಗನೂರಿ, ಸೂಗುರೇಶ ವಾರದ್, ದೊಡ್ಡ ದೇಸಾಯಿ ದೇವರಗೋನಾಲ, ಸುವರ್ಣ ಎಲಿಗಾರ, ರವಿಚಂದ್ರ ಸಾಹುಕಾರ, ರಾಜಶೇಖರಗೌಡ ವಜ್ಜಲ್, ವೆಂಕಟೇಶ ಹೊಸ್ಮನಿ, ರಾಘವೇಂದ್ರ ಕುಲಕರ್ಣಿ, ನಾಗರಾಜ ಕಲಬುರ್ಗಿ, ನಾಸಿರ್ ಕುಂಡಾಲೆ, ಜುಮ್ಮಣ್ಣ ಕೆಂಗುರಿ, ಖಾಲಿದ್ ಅಹ್ಮದ್ ತಾಳಿಕೋಟಿ, ಪ್ರಕಾಶ ಅಲಬನೂರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಸುರಪುರ ನಗರದ ರಂಗಂಪೇಟೆಯ ವಾರ್ಡ್ ಸಂಖ್ಯೆ 22ರ ಪರನಾಲ್ ಮೊಹಲ್ಲಾದಲ್ಲಿ 50.92 ಲಕ್ಷ ರೂಪಾಯಿಗಳ ಅನುದಾನದಲ್ಲಿ ನೂತನವಾಗಿ ನಿರ್ಮಿಸಲಾದ ಸ್ವಕುಳ ಸಾಳಿ ಸಮುದಾಯ ಭವನವನ್ನು ಶಾಸಕ ರಾಜಾ ವೇಣುಗೋಪಾಲ ನಾಯಕ ಲೋಕಾರ್ಪಣೆಗೊಳಿಸಿದರು.
ಸುರಪುರ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಎಸ್.ಡಿ.ಪಿ 2021-22 ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಉನ್ನತಿಕರಿಸಿದ ಕಟ್ಟಡವನ್ನು ಶಾಸಕ ರಾಜಾ ವೇಣುಗೊಪಾಲ ನಾಯಕ ಉದ್ಘಾಟಿಸಿದರು.
ಈ ವೇಳೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಅನೇಕ ಜನ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.







