ಯಾದಗಿರಿಯಲ್ಲಿ ದಹಿ ಹಂಡಿ ಉತ್ಸವಕ್ಕೆ ಚಾಲನೆ
ಭಾರತೀಯ ಸಂಸ್ಕೃತಿ ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಶ್ಲಾಘನೀಯ: ಶಾಸಕ ತುನ್ನೂರು

ಯಾದಗಿರಿ: ಪ್ರತಿ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದಲ್ಲಿ ದಹಿ ಹಂಡಿ ಉತ್ಸವ ಆಚರಿಸುವ ಮೂಲಕ ಭಾರತೀಯ ಸಂಸ್ಕೃತಿ ಹಾಗೂ ಧರ್ಮಾಚರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು.
ನಗರದ ಗಾಂಧಿ ಚೌಕ್‌ನಲ್ಲಿ ಗಿರಿನಾಡು ಗೆಳೆಯರ ಬಳಗ ಶನಿವಾರ ರಾತ್ರಿ ಆಯೋಜಿಸಿದ್ದ ದಹಿ ಹಂಡಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರೀಕೃಷ್ಣ ಪರಮಾತ್ಮನು ಜಗದ ಉದ್ಧಾರಕ್ಕಾಗಿ ಅವತರಿಸಿದ ಮಹಾನ್ ಚೇತನ. ಅವರ ಆದರ್ಶ, ಸಂದೇಶ ಮತ್ತು ಸಂಸ್ಕೃತಿಯನ್ನು ಜನ್ಮಾಷ್ಟಮಿ ಆಚರಣೆಗಳ ಮೂಲಕ ಯುವ ಪೀಳಿಗೆಗೆ ತಲುಪಿಸುವ ಕೆಲಸ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಶಶಾಂಕ ನಾಲ್ವಡಗಿ,ಮುಖಂಡರಾದ ತಾಯಪ್ಪ ಯಾದವ್, ಮಹೇಶ ಅನಪುರ, ಪದಾಧಿಕಾರಿಗಳಾದ ದೊಡ್ಡಪ್ಪ ಚಂಡಕ್ರಿ, ಬಸವಪ್ರಭು, ದೇವು ಶೆಟ್ಟಿ, ಸಚಿನ್ ರಾಜು, ನಾಗರಾಜ, ರಾಘವೆಂದ್ರ, ರಮೇಶ, ಗೌತಮ್, ಸಾಬರೆಡ್ಡಿ, ಜಗಣ್ಣ, ಸಾಬರೆಡ್ಡಿ ನಾಯ್ಕಲ್ ಇದ್ದರು.




