ಯಾದಗಿರಿ: ಸಿಡಿಲಿಗೆ ಬಲಿಯಾದ ಜಾನುವಾರುಗಳ ಮಾಲಕರಿಗೆ ಪರಿಹಾರ ವಿತರಣೆ

ಯಾದಗಿರಿ: ಸಿಡಿಲಿಗೆ ಬಲಿಯಾದ ಜಾನುವಾರುಗಳ ಮಾಲಕರಿಗೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಪರಿಹಾರ ವಿತರಿಸಿದರು.
ನಗರದ ತಮ್ಮ ಕಚೇರಿಯಲ್ಲಿ ಜಾನುವಾರಗಳ ಮಾಲಕರಿಗೆ ಪರಿಹಾರ ವಿತರಿಸಿ ಮಾತನಾಡಿದ ಅವರು, ಪ್ರಕೃತಿ ವಿಕೋಪಗಳಿಂದ ರೈತರಿಗೆ ತೊಂದರೆಯಾಗಿದ್ದು, ಅದನ್ನು ಗಮನಿಸಿದ ಸರ್ಕಾರದಿಂದ ಪರಿಹಾರ ಒದಗಿಸಲಾಗಿದೆ. ಆದಷ್ಟು ರೈತರು ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಜಾಗೃತಿಯಿಂದರಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಧ್ವಾರ ಗ್ರಾಮದ ಶಿವರಾಜ, ಸಾಯಿಬಣ್ಣ, ಬದ್ದೇಪಲ್ಲಿಯ ಉಮ್ಲಾನಾಯಕ, ಈಡ್ಲೂರ ಗ್ರಾಮದ ನರಸಿಂಗಪ್ಪ ಎಂಬ ರೈತರುಗಳಿಗೆ ಪರಿಹಾರ ಚೆಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಷಚಂದ್ರ ಕಟಕಟಿ, ಶಾಂತಗೌಡ ಬಿರಾದಾರ್ ತಹಶೀಲ್ದಾರ್, ಸಾಯಪ್ಪ ಮಾದ್ವಾರ, ತಾಯಪ್ಪ ಬಡ್ಡೆಪಲ್ಲಿ, ನರಸಪ್ಪ ಕವಡೆ, ಮಲ್ಲಿಕಾರ್ಜುನ ಅರುಣಿ, ಶ್ರೀಕಾಂತ ಬಡ್ಡೆಪಲ್ಲಿ, ತಮ್ಮಾರಡ್ಡಿ ಇಡ್ಲುರ್, ಶರಣರಡ್ಡಿ ಯಡಳ್ಳಿ, ಜಗದೀಶ್ ಕಲಾಲ್ ಸೇರಿದಂತೆ ಇತರರಿದ್ದರು.
Next Story





