ಯಾದಗಿರಿ: ಜಿಲ್ಲಾ ನೂತನ ಬಸ್ ನಿಲ್ದಾಣದಲ್ಲಿ ವಸ್ತುಪ್ರದರ್ಶನ ಉದ್ಘಾಟನೆ

ಯಾದಗಿರಿ: ಯಾದಗಿರಿ ನಗರದ ನೂತನ ಬಸ್ ನಿಲ್ದಾಣದಲ್ಲಿ ದಿನಾಂಕ:6-7-25 ರಿಂದ 8-7-25 ರವರೆಗೆ ಹಮ್ಮಿಕೊಳ್ಳಲಾದ ಸಕಾ೯ರದ 2 ವಷ೯ಗಳ ಸಾಧನಾ ಸಂಭ್ರಮ ಪ್ರಗತಿಯತ್ತ ಕನಾ೯ಟಕ ವಸ್ತುಪ್ರದಶ೯ನವನ್ನು ನಗರ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು ಇಂದು ಉದ್ಘಾಟಿಸಿದರು.
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹಲವು ರೀತಿಯಲ್ಲಿ ನೆರವಾಗಿದವೆ.ರೈತರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಹಿಳೆಯರು ಹೀಗೆ ಎಲ್ಲ ವರ್ಗದವರು ಲಾಭ ಪಡೆಯುತ್ತಿದ್ದಾರೆ.ಇ-ಖಾತಾ ಮೂಲಕವು ಸರ್ಕಾರ ನೆರವಾಗಿದ್ದು, ಅಭಿವೃದ್ಧಿಗೂ ಒತ್ತು ನೀಡಿದೆ ಎಂದು ಹೇಳಿ, ಇಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಸರ್ಕಾರದ ಎರಡು ವರ್ಷದ ಸಾಧನೆ ಹಾಗೂ ಪಂಚಗ್ಯಾರಂಟಿ ಯೋಜನೆಗಳ ಕುರಿತ ಮಾಹಿತಿ ಜನರಿಗೆ ಅರಿವು ಮೂಡಿಸಲು ನೆರವಾಗಿದೆ ಎಂದರು.
ಈ ಸಂದರ್ಭದಲ್ಲಿ ಯಾದಗಿರಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು ಸುಲೈಮಾನ್ ನದಾಫ, ಬಸ್ ಡಿಪೊ ಸಿಬ್ಬಂದಿ ಮೇಲ್ವಿಚಾರಕ ಪ್ರಶಾಂತ್ ಪಾಟೀಲ್, ನಗರ ಪೋಲಿಸ್ ಠಾಣೆ ಪಿಎಸ್ಐ ಮಂಜನಗೌಡ ಪಾಟೀಲ್ ಇತರರು ಉಪಸ್ಥಿತರಿದ್ದರು.