ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿ : ರಾಮನಗೌಡ ಮಾಲಿ ಪಾಟೀಲ್

ಸುರಪುರ: ತಾಲೂಕಿನ ಎಲ್ಲಾ ರೈತರು 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆಯನ್ನು ಕಡ್ಡಾಯವಾಗಿ ಮಾಡಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ರಾಮನಗೌಡ ಮಾಲಿ ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ತೊಗರಿ (ಮಳೆ ಅಶ್ರಿತ ) ಹಾಗೂ ಭತ್ತ (ನೀರಾವರಿಗೆ ) ವಿಮೆ ಮಾಡಿಸಲು ಆಗಷ್ಟ 14 ಕೊನೆಯ ದಿನವಾಗಿರುತ್ತದೆ. ಆದರೆ ಉಳಿದೆಲ್ಲ ಬೆಳೆಗಳಿಗೆ ವಿಮೆ ಅವಧಿ ಜುಲೈ 31ರಂದು ಕೊನೆಯ ದಿನಾಂಕ ಮುಕ್ತಾಯವಾಗಿದೆ. ಭತ್ತಕ್ಕೆ ಎಕರೆಗೆ 869 ರೂಪಾಯಿ ಹಾಗೂ ತೊಗರಿಗೆ ಎಕರೆಗೆ 461 ರೂಪಾಯಿ ಪಾವತಿಸಬೇಕಾಗಲಿದೆ. ವಿಮೆ ಮಾಡಿಸಲು ಹತ್ತಿರದ ಬ್ಯಾಂಕ್, ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್, ನಾಗರಿಕ ಸೇವಾ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನಾಗಲಿ ,ವಿಮಾ ಸಂಸ್ಥೆ ಪ್ರತಿನಿಧಿಗಳನ್ನು ಸಂಪರ್ಕಿಸಲು ತಿಳಿಸಿದ್ದಾರೆ.
ಅದೇ ರೀತಿಯಾಗಿ ಬೆಳೆ ಸಮೀಕ್ಷೆಯನ್ನು ಕಡ್ಡಾಯವಾಗಿ ಎಲ್ಲಾ ರೈತರು ಮಾಡಿಸಿಕೊಳ್ಳಬೇಕು. ಬೆಳೆ ವಿಮೆ ಪರಿಹಾರ ಪಡೆಯಲು ಹಾಗೂ ಬೆಳೆ ಹಾನಿ ಪರಿಹಾರ ಪಡೆಯಲು ಬೆಳೆ ಸಮೀಕ್ಷೆ ಅಗತ್ಯವಿದೆ ಎಂದು ರೈತರಿಗೆ ತಿಳಿಸಿದ್ದಾರೆ.




