ಗುರುಮಠಕಲ್ | ಹಬೀಬ್ ಅಬ್ದುಲ್ಲಾ ನಿಧನಕ್ಕೆ ಶಾಸಕ ಶರಣಗೌಡ ಕಂದಕೂರ್ ಸಂತಾಪ

ಗುರುಮಠಕಲ್: ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಹಬೀಬ್ ಅಹಮ್ಮದ್ ಅವರ ಅಣ್ಣ ಹಬೀಬ್ ಅಬ್ದುಲ್ಲಾ ಅವರ ನಿಧನಕ್ಕೆ ಶಾಸಕ ಶರಣಗೌಡ ಕಂದಕೂರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಳೆದ ಫೆ.6ರಂದು ವಯೋಸಹಜ ಕಾಯಿಲೆಯಿಂದ ಹಬೀಬ್ ಅಬ್ದುಲ್ಲಾ ಅವರು ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಫೆ.9ರಂದು ಶಾಸಕ ಶರಣಗೌಡ ಕಂದಕೂರ್ ಅವರು ಮೃತರ ನಿವಾಸಕ್ಕೆ ಭೇಟಿ ನೀಡಿ, ಹಬೀಬ್ ಅಹಮ್ಮದ್ ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕುಟುಂಬಕ್ಕೆ ನೀಡಲೆಂದು ಪ್ರಾರ್ಥಿಸಿದರು.
ಶಾಸಕರ ಭೇಟಿಯ ಸಂದರ್ಭದಲ್ಲಿ ಶರಣು ಅವಂಟಿ, ರವಿ, ಹಬೀಬ್ ಅಬೂಬಕ್ಕರ್, ಹಬೀಬ್ ಅಲಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
Next Story




