ಗುರುಮಠಕಲ್ | ಯಲ್ಹೇರಿ, ಚಿನ್ನಕಾರ ಗ್ರಾಮ ಪಂಚಾಯತ್‌ಗೆ ಸಿಇಒ ಭೇಟಿ

ಗುರುಮಠಕಲ್: ತಾಲ್ಲೂಕಿನ ಯಲ್ಹೇರಿ ಮತ್ತು ಚಿನ್ನಕಾರ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಓರಾಡಿಯಾ ಹಾಗೂ ಜಿಲ್ಲಾ ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ ಸೋಮವಾರ ಭೇಟಿ ನೀಡಿದರು.
ಯಲ್ಹೇರಿಯಲ್ಲಿ ಇಂಗು ಗುಂಡಿ ಕಾಮಗಾರಿಗಳು, ಶೌಚಾಲಯ, ಜಲ ಜೀವನ ಮಿಷನ್ (ಜೆಜೆಎಮ್) ಕಾಮಗಾರಿಗಳು ಹಾಗೂ ಅಂಗನವಾಡಿ ಕೇಂದ್ರವನ್ನು ಪರಿಶೀಲಿಸಿದ ಅಧಿಕಾರಿಗಳು, ಸ್ವಚ್ಛತೆಗೆ ಆದ್ಯತೆ ನೀಡಲು ಪಿಡಿಓಗೆ ಸೂಚನೆ ನೀಡಿದರು. ಜೊತೆಗೆ ಸ್ಥಳೀಯ ಎಲೆಕೇತೇಶ್ವರ ದೇವಾಲಯವನ್ನೂ ವೀಕ್ಷಿಸಿದರು.
ಚಿನ್ನಕಾರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಪೌಷ್ಟಿಕ ಆಹಾರ, ಸಮವಸ್ತ್ರ ಮತ್ತು ಶೂ ವಿತರಣೆ ಕುರಿತು ಮಾಹಿತಿ ಪಡೆದರು. ಅಲ್ಲದೇ ಶಾಲೆಯ ಅಭಿವೃದ್ಧಿ ಕಾಮಗಾರಿಗಳಾದ ಪ್ರತ್ಯೇಕ ಶೌಚಾಲಯ ಮತ್ತು ಕಾಂಪೌಂಡ್ ಕಟ್ಟಡವನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಶ್ ಪಾಟೀಲ್, ಯಲ್ಹೇರಿ ಪಿಡಿಓ ಶೋಭಾ ಪಾಟೀಲ್, ಚಿನ್ನಕಾರ ಪಿಡಿಓ ಸೈಯ್ಯದ್ ಅಲಿ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.







