ಯಾದಗಿರಿ: ಆರೋಗ್ಯ ಆವಿಷ್ಕಾರ ಕಾರ್ಯಕ್ರಮ ಹಿನ್ನೆಲೆ ಮೂರು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
ಯಾದಗಿರಿ: ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆರೋಗ್ಯ ಅವಿಷ್ಕಾರ ಕಾರ್ಯಕ್ರಮಕ್ಕೆ ಗಣ್ಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರ ಆಗಮನ ಹಿನ್ನೆಲೆಯಲ್ಲಿ ಜನಸಂದಣಿ ಉಂಟಾಗುವ ಸಾಧ್ಯತೆ ಇರುವುದರಿಂದ ಮಕ್ಕಳ ಹಿತದೃಷ್ಠಿಯಿಂದ ಕ್ರೀಡಾಂಗಣದ ಸಮೀಪ ಇರುವ ಡಾನ್ ಬೋಸ್ಕೋ, ಆರ್.ವಿ.ಎನ್ ಹಾಗೂ ಸೆಂಚುರಿಯನ್ ಶಾಲೆ-ಕಾಲೇಜುಗಳಿಗೆ ಜೂನ್ 14 ರಂದು ರಜೆ ಘೋಷಿಸಲಾಗಿದೆ ಎಂದು ಯಾದಗಿರಿ ಡಿ.ಡಿ.ಪಿ.ಐ ತಿಳಿಸಿದ್ದಾರೆ.
ಸದರಿ ರಜಾ ದಿನದ ಶಾಲಾ ಅವಧಿಯನ್ನು ಮುಂಬರುವ ಶನಿವಾರದಂದು ಪೂರ್ಣ ದಿನ ನಡೆಸಿ ಸರಿದೂಗಿಸುವಂತೆ ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ.
Next Story





