ಹುಣಸಗಿ | ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಜಿಪಂ ಯೋಜನೆ ನಿರ್ದೇಶಕ

ಹುಣಸಗಿ: ತಾಲೂಕಿನ ಕಾಮನಟಿಗಿ, ಬರದೇವನಾಳ ಹಾಗೂ ಜೋಗುಂಡಬಾವಿ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯಿತಿ ಯೋಜನೆ ನಿರ್ದೇಶಕ ಸಿ.ಬಿ. ದೇವರಮನಿ ಭೇಟಿ ನೀಡಿ ವಿಬಿಜಿ ರಾಮ್‌ಜಿ, ಡಿಸಿಬಿ, ಕರ ವಸೂಲಿ ಹಾಗೂ ಎನ್‌ಆರ್‌ಎಲ್‌ಎಂ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿ ಮತ್ತು ಭೌತಿಕ ಗುರಿಗಳನ್ನು ಪರಿಶೀಲಿಸಿದರು.
ವಿವಿಧ ಯೋಜನೆಗಳಡಿ ನಿಗದಿಪಡಿಸಿದ ಅವಧಿಯಲ್ಲಿ ಗರಿಷ್ಠ ಪ್ರಮಾಣದ ಕೆಲಸಗಳನ್ನು ಕೈಗೊಳ್ಳಬೇಕು. ವಿಬಿಜಿ ರಾಮ್‌ಜಿ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಜನರಿಗೆ ಉದ್ಯೋಗ ಒದಗಿಸುವ ಮೂಲಕ ಮಾನವ ದಿನಗಳನ್ನು ಸೃಜಿಸಬೇಕು. ಕೆಲಸ ಸಿಗದ ಕಾರಣ ಯಾರೂ ವಲಸೆ ಹೋಗದಂತೆ ತಮ್ಮ ವಾಸಸ್ಥಳದಲ್ಲಿಯೇ ಉದ್ಯೋಗ ದೊರೆಯುವ ವ್ಯವಸ್ಥೆ ಮಾಡಬೇಕು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಬಿಜಿ ರಾಮ್‌ಜಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಡಿಸಿಬಿ ಹಾಗೂ ಕರ ವಸೂಲಿಯ ಪ್ರಗತಿ ಪರಿಶೀಲಿಸಿದ ಅವರು, ತೆರಿಗೆಯಿಂದ ಗ್ರಾಮಗಳು ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿ ಸಾಧ್ಯವಾಗುತ್ತದೆ. ಹೀಗಾಗಿ ತೆರಿಗೆ ಬಾಕಿಯನ್ನು ಗರಿಷ್ಠ ಪ್ರಮಾಣದಲ್ಲಿ ವಸೂಲಿ ಮಾಡಿ, ಗ್ರಾಮಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯಗಳಿಗೆ ಬಳಸುವ ಮೂಲಕ ಗ್ರಾಮಗಳನ್ನು ಸುಸ್ಥಿರವಾಗಿ ಅಭಿವೃದ್ಧಿಪಡಿಸಬೇಕು ಎಂದರು.
ಎನ್‌ಆರ್‌ಎಲ್‌ಎಂ ಯೋಜನೆಯನ್ನೂ ಪರಿಶೀಲಿಸಿದ ಅವರು, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಈ ಯೋಜನೆ ಅತ್ಯಂತ ಉಪಯುಕ್ತವಾಗಿದೆ. ಯೋಜನೆಯ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು (ಗ್ರಾ.ಉ ) ಶ್ರೀಶೈಲ್ ಹಳ್ಳಿ, ಜಿಲ್ಲಾ ಎಂಐಸಿ ಸoಯೋಜಕ ರಾಘವೇಂದ್ರ, ಟಿಸಿ ಸುನೀಲ್ ಕುಮಾರ್,ತಾಂತ್ರಿಕ ಸಹಾಯಕ ಅರವಿಂದ್,ಪಿಡಿಓ ಅವರು, ಎನ್ ಎಲ್ ಆರ್ ಎಂ ಹಾಗೂ ಗ್ರಾಮ ಪಂಚಾಯತಿಯ ವಿವಿಧ ಹಂತದ ಸಿಬ್ಬಂದಿಗಳು ಇದ್ದರು.






