ಹುಣಸಗಿ | ವಿಶೇಷಚೇತನರ ಸಮನ್ವಯ ಸಭೆ

ಹುಣಸಗಿ : ನಾರಾಯಣಪುರ ಗ್ರಾಮ ಪಂಚಾಯತಿಯಲ್ಲಿ ಸರಕಾರದ ಹಾಗೂ ಗ್ರಾಮ ಪಂಚಾಯತ್‌ನ ಶೇ.5 ರಷ್ಟು ಅನುದಾನವನ್ನು ವಿವಿಧ ಕೆಲಸ ಕಾರ್ಯಗಳಿಗೆ ಸದ್ಬಳಕೆ ಮಾಡಲಾಗುತ್ತಿದ್ದು, ಇದರೊಟ್ಟಿಗೆ ಅಂಗವಿಕಲರ ಹಿತವೂ ಅಡಗಿದೆ ಎಂದು ಪಿಡಿಓ ಸಂತೋಷಕುಮಾರ ಹೇಳಿದರು.
ಸ್ಥಳಿಯ ಗ್ರಾ.ಪಂ ಯಲ್ಲಿ ವಿಶೇಷಚೇತನರ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.
ಅರ್ಹರ ವಿಕಲಚೇತನರಿಗೆ ಯುಡಿಐಡಿ ನೋಂದಣೆ, ಜಾಬ್ ಕಾರ್ಡ್ ಹಾಗೂ ಗ್ರಾ.ಪಂ ವ್ಯಾಪ್ತಿಗೊಳಪಡುವ ವಿಕಲಚೇತನರ ಸ್ವಸಹಾಯ ಸಂಘಗಳನ್ನು ಸೇರ್ಪಡೆ ಹಾಗೂ ಹೊಸ ಸಂಘಗಳ ರಚನೆ ಕುರಿತು ಮಾಹಿತಿ ನೀಡಲಾಗುವುದು ಎಂದರು.
ಈ ವೇಳೆ ರಮೇಶಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಗ್ರಾ.ಪಂ ಅಧ್ಯಕ್ಷರಾದ ಮುತ್ತು ಕಬಡರ್ ಎಪಿಡಿ ಸಿಬ್ಬಂದಿ ರಮೇಶಕುಮಾರ, ಸಂಗಮೇಶ, ವಿಆರ್‌ಡಬ್ಲು ಬಸವರಾಜ, ಆಂಜನೇಯ ದೊರೆ,ರಮೇಶ ಕೋಳೂರ, ದುರಗಪ್ಪ ರೋಡಲಬಂಡಾ, ವೀರೇಶ ಗಣಾಚಾರಿ, ಗೌಸ್‌ಮೋಹದೀನ್, ಚಂದಪ್ಪ ಹಾಗೂ ವಿಕಲಚೇತನರಿದ್ದರು.
Next Story





