ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯನವರೆ ನೇರ ಕಾರಣ: ಮಾಜಿ ಸಚಿವ ರಾಜೂಗೌಡ

ಯಾದಗಿರಿ: ಸಣ್ಣ ವಯಸ್ಸಿನಿಂದಲೂ ಸಿದ್ದರಾಮಯ್ಯ ಅವರನ್ನು ನೋಡಿ ಬೆಳೆದಿದ್ದೇವೆ. ನಮ್ಮ ತಂದೆ ಸರ್ಕಾರಿ ನೌಕರರು ಹಾಗಾಗಿ ಅವರನ್ನು ಹತ್ತಿರದಿಂದ ನೋಡಿರುವೆ. ಚಿಕ್ಕ ವಯಸ್ಸಿನಲ್ಲಿ ಸಿದ್ದರಾಮಯ್ಯ ಅವರನ್ನು ಹತ್ತಿರದಿಂದ ನೋಡಿದ ಕಾರಣಕ್ಕೆ ಅವರ ಮೇಲೆ ಹೆಚ್ಚು ಅಭಿಮಾನವಿದೆ ಎಂದು ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ರಾಜಕೀಯದ ಯುಗಪುರುಷರು, ಯಡಿಯೂರಪ್ಪನವರು ಸಹ ಯುಗಪುರುಷರು, ಇವರನ್ನು ಕಳೆದುಕೊಂಡು ಬಿಜೆಪಿ ಅವರು ನಾವೆಲ್ಲಾ ಅನುಭವಿಸಿದ್ದೇವೆ. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯನವರೆ ನೇರ ಕಾರಣ, ಅವರನ್ನೆ ಏಳು ತಾಸು ಮೀಟಿಂಗ್ ಮಾಡಿ ಕುರ್ಚಿಯಿಂದ ಕೆಳಗಡೆ ಇಳಿಸಿರುವುದು ಮನಸ್ಸಿಗೆ ನೋವಾಗಿದೆ ಎಂದು ಮಾಜಿ ಸಚಿವ ರಾಜೂಗೌಡ ಭಾವುಕ ನುಡಿಗಳಾಡಿದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯದಾಗುವುದಿಲ್ಲ, ಸಿದ್ದರಾಮಯ್ಯನವರ ಕಳೆದುಕೊಂಡು ಕಾಂಗ್ರೆಸ್ ಬೆನ್ನೆಲುಬು ಮುರಿದಂತೆ ಆಗಿದೆ. ಕಾಂಗ್ರೆಸ್ ಗೆ ಕೇಡುಗಾಲ ಶುರುವಾಯಿತು ಎಂದರು.
ಸಿದ್ದರಾಮಯ್ಯನವರ ನನ್ನ ಮೇಲೆ ಇನ್ನಿಲ್ಲದ ಪ್ರೀತಿ ಇದೆ, ಯಾವಾಗಲೂ ಭೇಟಿಯಾದಗಲೂ ಬಾರೋ ರಾಜೂಗೌಡ ಎಂದೇ ಸಂಬೋಧಿಸುತ್ತಿದ್ದರು ಎಂದು ಸಿದ್ದರಾಮಯ್ಯನವರ ಜೊತೆಗಿನ ಒಡನಾಟವನ್ನು ಹಂಚಿಕೊಂಡರು.
ನುಡಿದಂತೆ ನಡೆದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರ ಗತ್ತು, ಆಡಳಿತ ವೈಖರಿ ಡಿ.ಕೆ.ಶಿವಕುಮಾರ್ ಅವರಿಗೆ ಬರುತ್ತದೆ ಇಲ್ಲವೋ ನೋಡಬೇಕು, ಅವರಿಗೆ ಸವಾಲಿದೆ ಎಂದರು.
ಸಿಎಂ ಬದಲಾವಣೆ ಮೊದಲಿಂದಲೂ ಇದ್ದಾಗಲೂ ಸಿದ್ದರಾಮಯ್ಯನವರಿಗೆ ಮನಸ್ಸು ನೊಂದಿತ್ತು, ಅವರಿಗೆ ಸ್ವಾತಂತ್ರ ನೀಡಿ ಆಡಳಿತ ಮಾಡೋಕೆ ಬಿಟ್ಟಿಲ್ಲ, ಆದರೆ ಇದೀಗ ಕೊನೆಗೆ ರಾಜೀನಾಮೆ ಕೊಟ್ಟು ನಿರಾಳವಾಗಿದ್ದಾರೆ ಎಂದು ಹೇಳಿದರು.






