ನಾನು ಮಾತಾಡಲ್ಲ, ಕೆಲಸ ಮಾಡಿ ತೋರಿಸ್ತೀನಿ: ಶಾಸಕ ಶರಣಗೌಡ ಕಂದಕೂರ

ಯಾದಗಿರಿ: ಆಶನಾಳ ಗ್ರಾಮಕ್ಕೆ ಅಭಿವೃದ್ಧಿ ಮಾಡುವುದು ನನ್ನ ಜವಾಬ್ದಾರಿಯಾಗಿದೆ. ನಾನು ಮಾತಾಡಲ್ಲ, ಕೆಲಸ ಮಾಡಿ ತೋರಿಸ್ತೀನಿ. ನನ್ನ ತಂದೆಯವರಿದ್ದಾಗ ಈ ಗ್ರಾಮದ ಶಾಲೆ ಕೋಣೆ ಅಭಿವೃದ್ಧಿ ಮಾಡಿದ್ದೇವೆ. ಈಗ ನಾನು ಶಾಲೆ, ಅಂಗನವಾಡಿ ಕೇಂದ್ರದ ಜೊತೆಗೆ ರಸ್ತೆ, ಚರಂಡಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿ ತೋರಿಸುತ್ತೇನೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.
ತಾಲೂಕಿನ ಆಶನಾಳ ಗ್ರಾಮದಲ್ಲಿ 3ಕೋಟಿ ಹೆಚ್ಚು ಅನುದಾನದ ಅಭಿವೃದ್ಧಿ ಕಾಮಗಾರಿಗಳಾದ ಸಮಣಪುರ್ ಜಿರಕಿತಾಂಡದಲ್ಲಿ 10ಲಕ್ಷ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, ಹತ್ತಿಕುಣಿ ರಾಮನಾಯಕತಾಂಡದಲ್ಲಿ 10ಲಕ್ಷ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, ಬಾಚವಾರ ಹಳಿತಾಂಡದಲ್ಲಿ 10ಲಕ್ಷ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, ಬಾಚವಾರ ಹೊಸತಾಂಡದಲ್ಲಿ 10ಲಕ್ಷ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, ಹತ್ತಿಕುಣಿ ಎಸ್ಟಿ ವಾರ್ಡ್ ನಲ್ಲಿ 10ಲಕ್ಷ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, ಕುರುಕುಂಬಳ ತಾಂಡದಲ್ಲಿ 10ಲಕ್ಷ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, ಎಸ್.ಹೊಸಳ್ಳಿ 20ಲಕ್ಷ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, ಆಶನಾಳ ತಾಂಡದಲ್ಲಿ 10ಲಕ್ಷ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, ಸಮಣಾಪುರ್ ಸಣ್ಣ ತಾಂಡದಲ್ಲಿ 10ಲಕ್ಷ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, ಆಶನಾಳ ಗ್ರಾಮದಲ್ಲಿ, 30ಲಕ್ಷ ಸಿ.ಸಿ.ರಸ್ತೆ ನಿರ್ಮಾಣ, ಬೆಳಗೇರಾ ಗ್ರಾಮದ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2ಕೋಣೆಗಳು ಮತ್ತು ಸಲಕರಣೆಗಳು ಕಾಮಗಾರಿಯ ಅಡಿಗಲ್ಲು ಸಮಾರಂಭ, ಹೊನಗೇರಾ ಗ್ರಾಮದ, ಅಂಗನವಾಡಿ ಕೇಂದ್ರ-4 ಕಟ್ಟಡ ಕಾಮಗಾರಿಯ ಅಡಿಗಲ್ಲು ಸಮಾರಂಭ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಆಶನಾಳ ಗ್ರಾಮದ ಎಸ್ಸಿ ವಾರ್ಡ್ ನಲ್ಲಿ 20 ಲಕ್ಷ ಸಿಸಿ ರಸ್ತೆ ಅನುದಾನ ಬಿಡುಗಡೆಯಾಗಿದೆ, ಅಧಿವೇಶನದ ನಂತರ ಚಾಲನೆ ನೀಡಲಾಗುವುದು, ಆಂಜನೇಯ ಸ್ವಾಮಿ ದೇವಸ್ಥಾನ ಅಭಿವೃದ್ಧಿಯ ಜೊತೆಗೆ ಜೆಸ್ಕಾಂ ಮತ್ತು ಶಿಕ್ಷಣ ಇಲಾಖೆಯ ಕಾಮಗಾರಿಗಳಿಗೆ ಆದ್ಯತೆ ನೀಡುತ್ತೇನೆ, ಅದರ ಜೊತೆಗೆ ಆಶನಾಳ ಶಾಲೆ ಮಕ್ಕಳು ಶಾಲೆ ಆರ್‌ಒ ಪ್ಲಾಂಟ್ ಕೇಳುತ್ತಿದ್ದಾರೆ ಕೂಡಲೇ ಅವರಿಗೆ ಆರ್‌ಒ ಪ್ಲಾಂಟ್ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ಇಇ ಶಿವರಾಜ ಹುಡೇದ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾದ ರಾಮಣ್ಣ ಕೋಟಗೇರಾ, ಈಶ್ವರ ನಾಯಕ, ನರಸಪ್ಪ ಕವಡೆ ಸೇರಿದಂತೆ ಗ್ರಾಪಂ ಅಧ್ಯಕ್ಷರು, ಪಿಡಿಗಳು ಹಾಗೂ ಆಶನಾಳ ಗ್ರಾಮಸ್ಥರು, ಇತರರಿದ್ದರು.
ಆಶನಾಳ ಗ್ರಾಮಸ್ಥರ ಪ್ರೀತಿ, ವಿಶ್ವಾಸದ ಋಣ ತೀರಿಸಲಿಕ್ಕೆ ಸಾಧ್ಯವಿಲ್ಲ. ಆದರೆ ಅಭಿವೃದ್ಧಿಯ ಮುಖಾಂತರ ನಿಮ್ಮ ಋಣ ತೀರಿಸ್ತೀನಿ. ಕ್ಷೇತ್ರದ ಗ್ರಾಮ ಪಂಚಾಯತಿಯ ಎಲ್ಲಾ ಪಿಡಿಒಗಳು ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು.
- ಶರಣಗೌಡ ಕಂದಕೂರ, ಶಾಸಕರು, ಗುರಮಠಕಲ್







