ಯಾದಗಿರಿ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸ್ವಾತಂತ್ರೋತ್ಸವ ದಿನಾಚರಣೆ

ಯಾದಗಿರಿ: ನಮ್ಮ ದೇಶ ಸ್ವಾತಂತ್ರವಾಗಲು ಅನೇಕ ಮಹನೀಯರು ಶ್ರಮಿಸಿ, ತಮ್ಮ ಪ್ರಾಣವನ್ನೇ ಅರ್ಪಣೆ ಮಾಡಿದ್ದಾರೆ. ಈ ದಿನ ಸ್ವಾತಂತ್ರ್ಯ ಸೇನಾನಿಗಳನ್ನು ಗೌರವಿಸಿ ಸ್ಮರಿಸೋಣ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸುಬಾಶ್ಚಂದ್ರ ಕಟಕಟಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಇವತ್ತು ನಾವು ಸ್ವಾತಂತ್ರ್ಯ ದೊರೆತು 79 ರ ಸಂಭ್ರಮಾಚರಣೆಯಲ್ಲಿದ್ದೆವೆ, ಸ್ವಾತಂತ್ರ್ಯ ಕ್ಕೆ ಹೋರಾಡಿದ ಮಹನೀಯರ ತತ್ವ ಆದರ್ಶಗಳನ್ನು ಪಾಲಿಸೋಣ. ಪ್ರತಿಯೊಬ್ಬರು ದೇಶಾಭಿಮಾನ್ನು ಹೆಚ್ಚಿಸಿಕೊಳ್ಳಬೇಕಿದೆ, ದೇಶದ ಹಿತಕ್ಕಾಗಿ ಎಲ್ಲರು ಶ್ರಮಿಸೋಣ ಎಂದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ರಾಮಣ್ಣ ಕೋಟಗೇರಾ, ಮಹಿಳಾ ಘಕದ ಅದ್ಯಕ್ಷೆ ನಾಗರತ್ನ ಅನಪೂರ, ಜಿಲ್ಲಾ ವಕ್ತಾರ ಮಲ್ಲಣ್ಣಗೌಡ ಹಳಿಮನಿ, ದೇವಿದ್ರಪ್ಪ ಬಳಿಚಕ್ರ, ಬಸ್ಸುಗೌಡ ಚಾಮನಳ್ಳಿ, ತಾಯಪ್ಪ ಬದ್ದೇಪಲ್ಲಿ, ಕಯುಮ್ಮ ವಕೀಲ್, ವಿಶ್ವನಾಥ್ ಶಿರವಾರ, ನರಸಿಂಹರೆಡ್ಡಿ, ಶರಣಗೌಡ ಹೊಸಳ್ಳಿ, ಪರಂರೆಡ್ಡಿ ಕಂದಕೂರ್, ಮಹದೇವಪ್ಪ ಕಂದಕೂರ್, ಶಿವು ದೋರನಹಳ್ಳಿ, ಬಂದಪ್ಪ ಅರಳಿ, ರಾಜೂಗೌಡ, ನಿಂಗಪ್ಪ ಎಡ್ಡಲ್ಲಿ, ಮಲ್ಲಿಕಾರ್ಜುನ್ ಮೆಠಿ, ಯಲ್ಲಾಲಿಂಗ ಚಾಮನಳ್ಳಿ, ಉದಯ್ ಕುಮಾರ, ಆಂಜನೇಯ ಮತ್ತಿತರರು ಇದ್ದರು.







