ವೈವಿಧ್ಯತೆಯಲ್ಲಿ ಏಕತೆಯೊಂದಿಗೆ ಭಾರತ ದೇಶದ ರಕ್ಷಣೆ ಅವಶ್ಯಕ : ಸಚಿವ ಎಚ್.ಸಿ.ಮಹದೇವಪ್ಪ

ಶಹಾಪುರ: ವೈವಿಧ್ಯತೆಯಲ್ಲಿ ಏಕತೆಯೊಂದಿಗೆ ಭಾರತ ದೇಶದ ರಕ್ಷಣೆ ಅವಶ್ಯಕವಾಗಿದೆ. 140 ಕೋಟಿ ಜನರಾಶಿಗಳನ್ನೊಂದಿಗೆ ಈ ಭಾರತಕ್ಕೆ ಸಂವಿಧಾನ ಮಾತ್ರ ಅಖಂಡತೆಯನ್ನು ಸಾರುತ್ತಿದೆ. ಈ ನಿಟ್ಟಿನಲ್ಲಿ ಮನುವಾದಿಗಳು ಭಾರತೀಯ ಸಂವಿಧಾನದ ಪ್ರಜಾಸತಾತ್ಮಕ ಅಶೋತ್ತರಗಳನ್ನು ದಮನ ಮಾಡುತ್ತಿವೆ ಎಂದು ಕರ್ನಾಟಕದ ಸಮಾಜ ಕಲ್ಯಾಣ ಮಂತ್ರಿ ಎಚ್.ಸಿ.ಮಹದೇವಪ್ಪ ಕಳವಳ ವ್ಯಕ್ತಪಡಿಸಿದರು.
ಸಂವಿಧಾನವನ್ನು ಸಮಪರ್ಕವಾಗಿ ಜಾರಿಗೆ ತರುವುದು ಸರ್ಕಾರದ ಹೊಣೆಯಾಗಿದೆ. ಆದರೆ, ಇಂದು ಶೋಷಿತರ ಹಕ್ಕುಗಳ ಮೇಲೆ ಬಂಡವಾಳ ಶಾಹಿ ವರ್ಗ ಸವಾರಿ ಮಾಡುತ್ತಿದೆ ಎಂದ ಅವರು, ಪ್ರತಿಯೊಬ್ಬ ಪ್ರಜೆಗಳ ತಮ್ಮ ಹಕ್ಕನ್ನು ಚಲಾಯಿಸುವ ಅಧಿಕಾರ ನೀಡಿದ ಡಾ.ಬಾಬಾಸಾಹೇಬರು, ನಾಗರಿಕ ಹಕ್ಕನ್ನು ಕಸಿದುಕೊಳ್ಳುವ ಉನ್ನಾರದಲ್ಲಿ ದುಡ್ಡಿನ ದುರಾಸೆಗಳನ್ನು ತೋರಿಸಿ ಮತ ವ್ಯಾಪಾರಿಕರಣ ಮಾಡಿಕೊಳ್ಳುತ್ತಿರುವುದು ದುಃಖದ ಸಂತಿಯಾಗಿದೆ ಎಂದರು.
ಮುಂದಿನ ದಿನಮಾನಗಳನ್ನು ಸಂವಿಧಾನದ ಅಶೋತ್ತರಗಳನ್ನು ದುರ್ಭಲಗೊಳಿಸಿಕೊಂಡು ಮತಿಯ ಸವಾರಿ ಮಾಡುವ ಮುನ್ಸೂಚನೆ ನೀಡುತ್ತಿವೆ. ಜಾತಿ ಧರ್ಮ ಬಿಟ್ಟು ಶೊಷಿತ ವರ್ಗಗಳು ಒಂದಾಗಿ ಸಂಘಟಿತರಾಗಿದ್ದಲ್ಲಿ ಸಂವಿಧಾನ ರಕ್ಷಣೆ ಸಾಧ್ಯವೆಂದು ಅವರು ತಿಳಿಸಿದರು.
ಶಹಾಪುರ ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ಜರುಗಿದ ಶೋಷಿತರ ಐಕ್ಯತೆಗೆ ಸಮಾವೇಶ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.
ಕೊಡ್ಲಾ ಶ್ರೀ ಉರಲಿಂಗ ಪೆದ್ದಿ ಸಂಸ್ಥಾನದ ಜ್ಞಾನಪ್ರಕಾಶ ಸ್ವಾಮೀಜೀ, ಮತ್ತು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾದ ಆಲ್ ಹುಸೇನಿ ಸಜ್ಜಾದೆ ನಶೀನ ದರ್ಗಾ ಖಾಜಾ ಬಂದೆನವಾಜ್ ಗುಲಬರ್ಗಾರವರು ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ನಿಕೇತರಾಜ್ ಮೌರ್ಯ ಮತ್ತು ಅಹಿಂದ ರಾಜ್ಯಾಧ್ಯಕ್ಷರಾದ ಕೆ.ಎಮ್.ರಾಮಚಂದ್ರಪ್ಪ ಮಾತನಾಡಿದರು.
ಗೋಗಿ ಸಜ್ಜಾದ ನಸೀನ ಮುತ್ತುವಲಿ ಹಜರತ್ ಸೈದ್ ಪಾಷಾ ಇಸ್ಮಾಯಿಲ್ ಹುಸೇನಿ ಸಜ್ಜಾದೆ ನಶೀನ ದರ್ಗಾರವರು ದಿವ್ಯ ಸಾನಿದ್ಯ ವಹಿಸಿದ್ದರು. ಕ,ರಾ, ದ,ಸಂ,ಸ ರಾಜ್ಯ ಸಂಚಾಲಕರಾದ ಡಾ.ಡಿ.ಜಿ.ಸಾಗರವರು ಅಧ್ಯಕ್ಷತೆ ವಹಿಸಿದ್ದರು.
ವಯೋ ನಿವೃತ್ತಿ ಹೊಂದಿದ ಶಿಕ್ಷಕರಾದ ಶ್ರೀಶೈಲ್ ಹೋಸಮನಿ ದಂಪತಿಗಳಿಗೆ ಸಚಿವರು, ಸಂತರು ಗೌರವಿಸಿ ಸನ್ಮಾನಿಸಿದರು.
ಅಹಿಂದ ಮುಖಂಡರಾದ ತಿಮ್ಮಯ್ಯ ಪರ‍್ಲೆ, ಡಾ.ಭೀಮಣ್ಣ ಮೇಟಿ, ಅಯ್ಯಣ್ಣ ಕನ್ಯಾಕೊಳೂರ, ಹಣಮೇಗೌಡ ಮರ್ಕಲ್, ಶರಣಪ್ಪ ಸಲಾದಪುರ, ಬಸವರಾಜಪ್ಪಗೌಡ ತಂಗಡಿಗಿ, ಗೌಡಪ್ಪಗೌಡ ಆಲ್ದಾಳ, ಶಿವುಪುತ್ರ ಜವಳಿ, ಹೊನ್ನಪ್ಪ ಗಂಗನಾಳ, ಶಿವುಕುಮಾರ ತಳವಾರ, ಅಶೋಕ ಹೋಸಮನಿ,ಸೈದ್ ಮುಸ್ಫಾಫ ದರ್ಬಾನ, ಮರೆಪ್ಪ ಚಟ್ಟೇರಕರ್, ರಾಮಣ್ಣ ಸಾದ್ಯಾಪೂರ, ಸೇರಿದಂತೆ ಅನೇಕ ಗಣ್ಯರು ರಾಜಕೀಯ ಮುಖಂಡರು ಅಹಿಂದ ಕಾರ್ಯಕರ್ತರು ಭಾಗವಹಿಸಿದ್ದರು.
ರಾಜ್ಯದಲ್ಲಿ 6 ಸಾವಿರ ಜಾತಿಗಳಿವೆ. ಸಂವಿಧಾನದ ಅಡಿಯಲ್ಲಿ ಬದುಕುವ ನಾವುಗಳು ಒಗ್ಗಟ್ಟಿನ ಶಕ್ತಿಯಾಗಬೇಕು. ಮನುವಾದಿಗಳು ಇಂದು ಧಾರ್ಮಿಕ ಶೋಷಣೆಗಳಿಂದ ಸಂಘಟಿತ ಶಕ್ತಿಗೆ ದುರ್ಬಲ ಮಾಡುತ್ತಿದ್ದು, ಹೊರಗಿನ ಪ್ರಾಪಂಚಿಕವಾಗಿ ನಾವುಗಳು ಹೇಗಿದ್ದರೂ ಶೋಷಣೆಯಾಗಿದ್ದಾಗ ಶೊಷಿತರು ಒಂದಾಗಿ ಅಖಂಡ ಭಾರತಕ್ಕೆ ಶಕ್ತಿಯಾಗಬೇಕು. ಎಸ್.ಸಿ, ಎಸ್.ಟಿ, ಯೋಜನೆಗಳನ್ನು ಜಾರಿಗೊಳಿಸಿದ್ದ ಅನೇಕ ಯೋಜನೆಗಳನ್ನು ಹಿಂದಿನ ಸರ್ಕಾರ ರದ್ದುಗೊಳಿಸಿತ್ತು, ಇಂದು ರಾಜ್ಯ ಸರ್ಕಾರ ಅವುಗಳಿಗೆ ಪುನರ್ ಜೀವ ನೀಡಿ ಯೋಜನೆ ಜಾರಿಗೆ ಶ್ರಮವಹಿಸಲಾಗುತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನಪರ ಮಾದರಿಯಾಗಿವೆ.
ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವರು ಕರ್ನಾಟಕ ಸರ್ಕಾರ.







