ಯಾದಗಿರಿ; ಜನತಾ ಬಜಾರ್ ಮಳಿಗೆ ಉದ್ಘಾಟನೆ

ಯಾದಗಿರಿ: ಜಿಲ್ಲಾ ಆಡಳಿತ ಭವನದಲ್ಲಿ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆ ನಿ, (ಜನತಾ ಬಜಾರ) ಯಾದಗಿರಿ ಸಂಘದ ಕಾರ್ಯಾಲಯ ಮತ್ತು ಸಗಟು ಮಾರಟ ಮಳಿಗೆಯನ್ನು ಜಿಲ್ಲಾಧಿಕಾರಿ ಡಾ.ಸುಶಿಲಾ ಬಿ. ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸರಕಾರಕ್ಕೆ ಉಳಿತಾಯ ಮಾಡಲು ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆ ಜಿಲ್ಲೆಗೆ ಬಹಳ ಅವಶ್ಯಕತೆ ಇದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ ಒರಡಿಯಾ ಮಾತನಾಡಿ, ಜಿಲ್ಲೆಯ ಎಲ್ಲಾ ಸಹಕಾರಿ ಕಛೇರಿಗಳಿಗೆ ಸರಬರಾಜು ಮಾಡಲು ಸಂಘದ ಮುಖಾಂತರ ಉನ್ನತ ಮಟ್ಟದ ಮಾರಾಟ ಕೇಂದ್ರ ಜಿಲ್ಲೆಯಲ್ಲಿ ಮಾಡಿದ್ದು ಸಂತಸ ತಂದಿದೆ ಎಂದು ಹೇಳಿದರು.
ಸಹಕಾರ ಪಿತಾಮಹರ ಭಾವಚಿತ್ರಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಪುಷ್ಪರ್ಚನೆ ಮಾಡಿದರು.
ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆ ಅಧ್ಯಕ್ಷ ನಿತಿನ್ ವಿಶ್ವನಾಥರಡ್ಡಿ ದರ್ಶನಾಪೂರ ಕಾರ್ಯಕ್ರಮದ ಅಧ್ಯಕ್ಷತೆಯ ವಹಿಸಿದ್ದರು.
ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ್, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ, ಉಪಕಾರ್ಯದರ್ಶಿ ವಿಜಯಕುಮಾರ್ ಮಡ್ಡೆ, ಸಹಕಾರ ಇಲಾಖೆ ಉಪನಿಬಂಧಕ ಪವನಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಚನ್ನಬಸಪ್ಪ, ಕುಮಲಯ್ಯ, ವೆಂಕಟೇಶ ಚಟ್ನಳಿ, ಸಹಕಾರ ಹಿರಿಯ ಮುಖಂಡರುಗಳಾದ ಬಾಪುಗೌಡ ಹುಣಸಗಿ ಕೆಂಚಪ್ಪ ನಗನೂರ, ವಿಶ್ವನಾಥರಡ್ಡಿ ದರ್ಶನಾಪೂರ, ಶರಣು ಗೌಡ ಗುಂಡುಗುರ್ತಿ, ರಾಜಾ ಮುಖಂದ ನಾಯಕ, ಪ್ರಕಾಶ ಸಜ್ಜನ, ಪ್ರಕಾಶ ಅಂಗಡಿ, ಎಂನಾರಾಯಣ ಇತರರಿದ್ದರು.