ನ.13ರಂದು ಯಾದಗಿರಿಯಲ್ಲಿ ಉದ್ಯೋಗ ಮೇಳ

ಯಾದಗಿರಿ: ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ನವೆಂಬರ್ 13ರಂದು ತಂಜಿಮುಲ್ ಮುಸ್ಲಿಮೀನ್ ಬೈತುಲ್‌ಮಾಲ್ ವತಿಯಿಂದ ಯಾದಗಿರಿ ನಗರದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಇರ್ಫಾನ್ ಹುಸೇನ್ ಬಾದಲ್ ತಿಳಿಸಿದ್ದಾರೆ.
ನಗರದ ಮಿಲತ್‌ನಗರದಲ್ಲಿರುವ ಈಡನ್ ಗಾರ್ಡನ್ ಫಂಕ್ಷನ್ ಹಾಲ್‌ನಲ್ಲಿ ಅಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದೆ.
ಸಿಎನ್‌ಸಿ, ವಿಎಂಸಿ, ಮಷಿನ್ ಆಪರೇಟರ್, ಡಿಪ್ಲೊಮಾ, ಆಟೋಮೊಬೈಲ್, ಐಟಿಐ ಎಲೆಕ್ಟ್ರಾನಿಕ್ಸ್ ಹಾಗೂ 10 ಮತ್ತು 12ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಬಹುದು. ಇದರೊಂದಿಗೆ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು, ವೆಲ್ಡರ್, ಫಿಟ್ಟರ್ ಹಾಗೂ ಎಲೆಕ್ಟ್ರಾನಿಕ್ಸ್ ವಿಭಾಗದ ಅಭ್ಯರ್ಥಿಗಳಿಗೂ ಉದ್ಯೋಗಾವಕಾಶ ಕಲ್ಪಿಸಲಾಗಿದೆ.
ಪುಣೆಯ ಬ್ರೆಂಬೊ ಬ್ರೇಕ್ಸ್ ಹಾಗೂ ಬ್ಲಿಂಕಿಟ್ ಸೇರಿದಂತೆ ವಿವಿಧ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ.
ಜಿಲ್ಲೆಯ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಗೌರವಾಧ್ಯಕ್ಷ ವಾಹೆದಮಿಯ್ ಹಾಗೂ ಪ್ರಧಾನ ಕಾರ್ಯದರ್ಶಿ ಜಿ. ಹಫೀಜ್ ಪಟೇಲ್ ಅವರನ್ನು 9663966163 ಅಥವಾ 7892300023 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.




