ಕನ್ನಡ ಬಾಷೆ ಅತಿ ಶ್ರೇಷ್ಠವಾದ ಬಾಷೆ: ಶಾಸಕ ತೂನ್ನೂರು

ಯಾದಗಿರಿ: ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾದಂತೆ. ಕನ್ನಡದ ನಾಡು-ನುಡಿ ಭಾಷೆಯ ಉಳಿವಿಗೆ ಸದಾ ಸಿದ್ದ ಎಂದು ಯಾದಗಿರಿ ಮತಕ್ಷೇತ್ರದ ಶಾಸಕರಾದ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಯಾದಗಿರಿ ವತಿಯಿಂದ ಹಮ್ಮಿಕೊಂಡಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆ 1 ರಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶತಪ್ರತಿಶತ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ವಿದ್ಯಾ ಸ್ಪೂರ್ತಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.
ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, "ಯಾವುದೇ ಕ್ಷೇತ್ರದ ಒಬ್ಬ ಪ್ರತಿಷ್ಠಿತ ವ್ಯಕ್ತಿ ಒಂದು ಭಾಷೆಯ ಬಗ್ಗೆ ಮಾತನಾಡಬೇಕಾದರೆ ತುಂಬಾ ಎಚ್ಚರಿಕೆಯಿಂದ ಮಾತನಾಡಬೇಕು. ತಾಯಿನುಡಿಯ ಬಗ್ಗೆ ಅವಹೇಳನಕಾರಿ ಮಾತುಗಳು ಸಲ್ಲದು. 2000 ವರ್ಷಗಳ ಪ್ರಾಚೀನ ಇತಿಹಾಸ ಹೊಂದಿರುವ ಕನ್ನಡ ಭಾಷೆ ಅತಿ ಶ್ರೇಷ್ಠವಾದ ಭಾಷೆಯಾಗಿದೆ. ಈ ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನ ಪಡೆದಿರುವಂತಹ ವಿದ್ಯಾರ್ಥಿಗಳನ್ನು ಕಂಡು ತುಂಬಾ ಸಂತೋಷವಾಗಿದೆ. ಈ ಪರಿಶ್ರಮದ ಹಿಂದೆ ವಿದ್ಯಾರ್ಥಿಯ ಪ್ರಯತ್ನ ಪಾಲಕರ ಶಿಕ್ಷಕರ ಜವಾಬ್ದಾರಿ ಎದ್ದು ಕಾಣುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಗೆ ಸಂಸ್ಕೃತಿ ಸಂಸ್ಕಾರವು ಇರಬೇಕು. ಕಠಿಣ ಪರಿಶ್ರಮ ನಿಮ್ಮನ್ನು ಉತ್ತಮ ಹುದ್ದೆಗೆ ಕರೆದುಕೊಂಡು ಹೋಗುತ್ತದೆ. ಕಲ್ಯಾಣ ಕರ್ನಾಟಕದ 371 ಜೆ ಅನುಕೂಲ ವನ್ನು ಎಲ್ಲರೂ ಪಡೆದುಕೊಳ್ಳಬೇಕು. ನಿಮ್ಮ ಶಿಕ್ಷಣ ಪ್ರಗತಿ ನಿಮ್ಮ ಪೋಷಕರ ಕನಸು ಈ ಸಮಾಜದ ನಿರೀಕ್ಷೆ ಕೂಡ ಆಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯಾದಗಿರಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೆಂಕಟೇಶ ಕಲಕಂಭ, "ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮವೆಂದರೆ ಅದೊಂದು ಹಬ್ಬದ ಸಂಭ್ರಮ ಕಳೆದ ಅನೇಕ ವರ್ಷಗಳಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ನಾಡು ನುಡಿ ಉಳಿವಿಗಾಗಿ ಬೆಳವಣಿಗೆಗಾಗಿ ಶ್ರಮಿಸುತ್ತಿದೆ ಕನ್ನಡ ಶಾಲೆಯನ್ನು ಉಳಿಸುವಂತಹ ಬೆಳೆಸುವಂತ ನಿಟ್ಟಿನಲ್ಲಿ ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಕನ್ನಡ ವಿದ್ಯಾ ಸ್ಪೂರ್ತಿ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡು ಬಂದಿದೆ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ನಮ್ಮದು ಎಂದರು.
ಎಸ್ ಎಸ್ ಎಲ್ ಸಿ ಫಲಿತಾಂಶ ಗುಣಮಟ್ಟಕ್ಕೆ ಶ್ರಮಿಸಿದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಚನ್ನಬಸಪ್ಪ ಮುಧೋಳ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಿಶೇಷ ಸನ್ಮಾನವನ್ನು ಸ್ವೀಕರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷರಾದ ರಾಯಪ್ಪಗೌಡ ಹುಡೇದ ಮಾತನಾಡಿ, ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅನೇಕ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವುದರ ಮೂಲಕ ಜನರಲ್ಲಿ ಕನ್ನಡದ ಪ್ರೇಮವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಶೋಕ ಕೆಂಭಾವಿ ಮಾತನಾಡಿ, "ಇವತ್ತಿನ ಸನ್ಮಾನ ಸ್ವೀಕರಿಸುತ್ತಿರುವ ಮಕ್ಕಳ ತಂದೆ ತಾಯಿ ಪಾಲಕರು ಶಿಕ್ಷಕರೇ ಧನ್ಯರು ವಿದ್ಯಾರ್ಥಿಗಳ ಶ್ರಮ ದೊಡ್ಡದು ಇವತ್ತಿನ ವಿದ್ಯಾರ್ಥಿಗಳೇ ನಾಳಿನ ನಾಗರಿಕರು ಇವರ ಈ ಸಾಧನೆ ಈ ನೆಲದ ಕೀರ್ತಿಯನ್ನು ಹೆಚ್ಚಿಸಿದೆ ಮಗುವಿನ ಕಲಿಕೆಯಲ್ಲಿ ಶಿಕ್ಷಕ ಪಾಲಕ ಬಾಲಕನ ಪಾತ್ರ ದೊಡ್ಡದು ಆದರೆ ಒಬ್ಬರನ್ನೇ ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಶಿಕ್ಷಕ ಸಮುದಾಯವನ್ನು ಗೌರವಿಸುವಂಥದ್ದು ಸಮಾಜದ ಜವಾಬ್ದಾರಿ ವಾಸ್ತವವನ್ನು ಅರಿಯಬೇಕು ಮಕ್ಕಳ ಪಾಲಕರು ಬೆಂಬಲವಾಗಿರಬೇಕು" ಎಂದು ತಿಳಿಸಿದರು.
ತಾಲೂಕಿನ ಕ್ಷೇತ್ರ ಸಮನ್ವಯ ಅಧಿಕಾರಿ ಮಲ್ಲಿಕಾರ್ಜುನ ಪೂಜಾರಿ ಮಾತನಾಡಿ, "ಭಾಷೆ ವ್ಯಕ್ತಿತ್ವವನ್ನ ಬೆಳೆಸುತ್ತದೆ ಅನ್ಯ ಭಾಷೆಯನ್ನ ಕಲಿಯಬೇಕು ಆದರೆ ಕನ್ನಡ ಭಾಷೆಯನ್ನ ಮರೆಯಬಾರದು ಬದುಕಿನ ಜೀವನದ ಪಾಠ ಹೇಳಿದೆ ನಮ್ಮ ಏಳಿಗೆ ಕನ್ನಡದಿಂದಲೇ ಮಾತ್ರ ಸಾಧ್ಯ ಭಾಷೆಯ ಬೆಳವಣಿಗೆ ಆ ಸಮುದಾಯದ ಪ್ರೇಮದ ಮೇಲೆ ನಿಂತಿದೆ ವಿದ್ಯಾರ್ಥಿಗಳಿಗೆ ತೊಡಿಸಿದ ಕನ್ನಡದ ಶಾಲು ವಿದ್ಯಾರ್ಥಿಗಳ ಕನ್ನಡ ಪ್ರೇಮ ಅಭಿಮಾನ ಹೆಚ್ಚಿಸಿದೆ ಇನ್ನೂ ಅವರಿಂದ ಕನ್ನಡದ ಜ್ಯೋತಿ ಬೆಳಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಒಂದರಲ್ಲಿ ಕನ್ನಡ ಭಾಷಾ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ ಯಾದಗಿರಿ, ಗುರುಮಠಕಲ್, ವಡಗೇರಾ ತಾಲೂಕಿನ 60 ವಿದ್ಯಾರ್ಥಿಗಳಿಗೆ ಕನ್ನಡ ವಿದ್ಯಾ ಸ್ಪೂರ್ತಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ಯಾದಗಿರಿ ತಾಲೂಕಿನ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶರಣಗೌಡ ಪಾಟೀಲ ವಡಗೇರಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲಿಕಾರ್ಜುನ ಕರಕಳ್ಳಿ. ಗುರುಮಿಟ್ಕಲ್ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸರೆಡ್ಡಿ ಎಂ ಟಿ ಪಲ್ಲಿ ಕಾರ್ಯಕ್ರಮದ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಡಾ. ಭೀಮರಾಯ ಲಿಂಗೇರಿ ಕಾರ್ಯಕ್ರಮ ನಿರೂಪಿಸಿದರು ಕೋಕಂಲ್ ವಲಯ ಕ ಸಾ ಪ ಅಧ್ಯಕ್ಷ ಮಲ್ಲಿಕಾರ್ಜುನ ಕೌಲಗಿ ಸ್ವಾಗತಿಸಿದರು ವಿದ್ಯಾರ್ಥಿಗಳ ಸನ್ಮಾನ ಕಾರ್ಯವನ್ನು ಮಹೇಶ ಪಾಟೀಲ ಕಿಲ್ಲನಕೇರ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಅಯ್ಯಣ್ಣ ಹುಂಡೇಕಾರ. ಸಿ ಎಮ್ ಪಟ್ಟೇದಾರ. ಆರ್ ಮಾಹದೇವಪ್ಪಗೌಡ ಅಬ್ಬೆತುಮಕೂರ. ಡಾ. ಸುಭಾಷಚಂದ್ರ ಕೌಲಗಿ. ಸ್ವಾಮಿದೇವ ದಾಸನಕೇರಿ. ಡಾ ಎಸ್ ಎಸ್ ನಾಯಕ. ಡಾ. ಸೋಮಶೇಖರ್ ಮಣ್ಣೂರ. ಶ್ರೀಮತಿ ನಾಗರತ್ನ ಅನಪೂರ. ವಿಜಯಲಕ್ಷ್ಮಿ ರಾಮಗಿರಿ ಮಠ. ಬಸವಂತ್ರಾಯ ಗೌಡ ಮಾಲಿ ಪಾಟೀಲ್. ನಾಗೆಂದ್ರ ಜಾಜಿ. ಚೆನ್ನಪ್ಪ ಸಾಹು ಠಾಣಗುಂದಿ.ನೂರಂದಪ್ಪ ಲೇವಡಿ. ಶೇಖರ ಅರಳಿ. ಬಸನಗೌಡ ಪಾಟೀಲ ಸುಭಾಷರೆಡ್ಡಿ ಬೀರನೂರ ದೇವರಾಜ್ ಗೌಡ. ರಮೇಶ ಈಟ್ಟೆ ಇತರರು ಇದ್ದರು.