ಯಾದಗಿರಿ: ತಿಮ್ಮಾಪುರ - ಕನ್ಯಾ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮ
ಕಲಿಕಾ ಹಬ್ಬ ಇಲಾಖೆ ಪೋಷಕರ ಜೋಡಿಸುವ ಯೋಜನೆ: ಕ್ಯಾದಗಿ

ಸುರಪುರ: ಎಫ್.ಎಲ್.ಎನ್ ಕಲಿಕಾ ಹಬ್ಬವು ಶಿಕ್ಷಣ ಇಲಾಖೆ ಹಾಗೂ ಎಲ್ಲಾ ಪಾಲಕ ಪೋಷಕರನ್ನು ಜೋಡಿಸುವ ಯೋಜನೆಯಾಗಿದೆ ಎಂದು ಸಿಆರ್‌ಪಿ ಚನ್ನಪ್ಪ ಕ್ಯಾದಗಿ ಮಾತನಾಡಿದರು.
ನಗರದ ತಿಮ್ಮಾಪುರದ ಸರಕಾರಿ ಕನ್ಯಾ ಪ್ರಾಥಮಿಕ ಶಾಲೆ ಆವರಣದಲಿ ಸಮೂಹ ಸಂಪನ್ಮೂಲ ಕೇಂದ್ರ ರಂಗAಪೇಟೆ ವತಿಯಿಂದ ಹಮ್ಮಿಕೊಂಡಿದ್ದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಮಕ್ಕಳಿಕೆ ಕಲಿಕೆಯು ಅತಿ ಸುಲಭವಾಗಿ ತಿಳಿಸುವ,ವಿಷಯವನ್ನು ಅನುಕೂಲಿಸುವ ಹಾಗೂ ಮಾದರಿಗಳೊಂದಿಗೆ ಕಲಿಕೆ ಉತ್ತಮಪಡಿಸುವದಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕೆಪಿಎಸ್ ಶಾಲೆ ಉಪ ಪ್ರಾಂಶುಪಾಲ ಸಿದ್ದಣ್ಣ ಹೊಸಗೌಡರ್ ಮಾತನಾಡಿ,ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಎಫ್.ಎಲ್.ಎನ್ ಕಲಿಕೆಯು ಪರಿಣಾಮಕಾರಿಯಾಗಿದೆ, ಇದರಿಂದ ಮಕ್ಕಳಲ್ಲಿ ಕಲಿಕಾ ಮಟ್ಟವನ್ನು ಹೆಚ್ಚಿಸುವುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಧಾನಗುರು ಮುದ್ದಪ್ಪ ಅಪ್ಪಾಗೊಳ ಮಾತನಾಡಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಗರಸಭೆ ಸದಸ್ಯ ನಾಸೀರ ಹುಸೇನ್ ಕುಂಡಾಲೆ,ವಾಸುದೇವ ಮಂಗಳೂರ,ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸುರೇಶ ಖಾದಿ,ಜಿಎಮ್‌ಪಿಎಸ್ ಪ್ರಧಾನಗುರು ಮಂದಾಕಿನಿ,ಯಲ್ಲಪ್ಪ ಮಾಲಗತ್ತಿ,ದೀವಳಗುಡ್ಡ ಶಾಲೆ ಪ್ರಧಾನಗುರು ರಹೀಮ್ ಹವಲ್ದಾರ್ ವೇದಿಕೆಯಲ್ಲಿದ್ದರು.ಶಿಕ್ಷಕರಾದ ಹಣಮಂತ್ರಾಯ ಝಂಡದಕೇರ,ಬಸಪ್ಪ,ದುರ್ಗಪ್ಪ ಪ್ರಧಾನಗುರು ಮಲ್ಲಿಬಾವಿ ಇತರರು ಭಾಗವಹಿಸಿದ್ದರು.ಶಿಕ್ಷಕ ಸಿದ್ದನಗೌಡ ನಿರೂಪಿಸಿದರು, ಲಕ್ಷ್ಮಣ ಸ್ವಾಗತಿಸಿದರು,ಮೊಹ್ಮದ್ ಶಕೀಲ್ ಅಹ್ಮದ್ ವಂದಿಸಿದರು.ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.







