ಅಭಿವೃದ್ಧಿ ವಿಷಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟೀಕಿಸುವ ನೈತಿಕತೆ ಕುಮಾರಸ್ವಾಮಿ ಅವರಿಗಿಲ್ಲ : ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು

ಚೆನ್ನಾರೆಡ್ಡಿ ಪಾಟೀಲ್ ತುನ್ನೂರು
ಯಾದಗಿರಿ: ಅಭಿವೃದ್ಧಿ ವಿಷಯದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟೀಕಿಸುವ ಯಾವ ನೈತಿಕತೆಯು ಕೇಂದ್ರ ಮಂತ್ರಿ ಕುಮಾರಸ್ವಾಮಿ ಅವರಿಗೆ ಇಲ್ಲ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ರಾಜಕಾರಣ ಮತ್ತು ಅಧಿಕಾರದಲ್ಲಿ ಸುಮಾರು ಐವತ್ತು ವರ್ಷಗಳಿಂದಲ್ಲೂ ಇರುವ ಖರ್ಗೆ ಅವರ ಅಭಿವೃದ್ಧಿ ಮತ್ತು ಸಾಧನೆ ಬಗ್ಗೆ ನಾಡಿನ ಸಮಸ್ತ ಜನತೆಗೆ ತಿಳಿದಿದೆ. ನಿಮಗೆ ತಿಳಿದಿಲ್ಲದಿದ್ದರೆ, ದಾಖಲೆಗಳನ್ನು ತೆಗೆದು ನೋಡಿ ಎಂದು ಹೇಳಿದ್ದಾರೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ 371(ಜೆ) ಜಾರಿ, ಕೇಂದ್ರೀಯ ವಿಶ್ವವಿದ್ಯಾಲಯ, ಇಎಸ್ಐ ಆಸ್ಪತ್ರೆ, ಹೈಕೋರ್ಟ್ ಪೀಠ್, ಪೊಲೀಸ್ ತರಬೇತಿ ಕೇಂದ್ರ ಹೀಗೆ ಬೆರಳೆಣಿಕೆಯಷ್ಟು ಕೆಲಸಗಳು ನಿಮ್ಮ ಗಮನಕ್ಕೆ ತರಲಾಗಿದ್ದು, ಬೇಕಾದರೇ ಒಂದು ದೊಡ್ಡ ಪಟ್ಟಿಯೇ ಸಿದ್ದಪಡಿಸಿ ನೀಡಲಾಗುವುದೆಂದು ತಿಳಿಸಿದ್ದಾರೆ.
ದೇಶ ಮತ್ತು ರಾಜ್ಯವನ್ನೇ ಆಳಿದ ಕುಟುಂಬ ನಿಮ್ಮದು. ನೀವು ಎಷ್ಟು ಅಭಿವೃದ್ಧಿ ಮಾಡಿದ್ದಿರಿ, ಎಷ್ಟು ಜನರನ್ನು ಬೆಳೆಸಿದ್ದಿರಿ ಎಂದು ಪ್ರಶ್ನಿಸಿದ್ದಾರೆ.
ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೊಸ, ಹೊಸ ಯೋಜನೆಗಳ ಮೂಲಕ ಸಕಾರಗೊಳಿಸಲು ಮುಂದಾಗಿದ್ದು ,ತಮಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ನಿಖರ ಕಾರಣವಿಲ್ಲದೇ ಅಕ್ಕ, ಪಕ್ಕ ಕುಳಿತವರಿಂದ ಕೇಳಿ, ಖರ್ಗೆ ಅವರ ಬಗ್ಗೆ ಟೀಕಿಸುವುದು ನೋಡಿದರೇ ಬಾಯಿ ಚಪಲಕ್ಕೆ ಮತ್ತು ಯಾರನ್ನೋ ಖುಷಿಪಡಿಸಲು ಮಾತಾಡಿದ್ದೀರಿ ಎಂಬುವುದು ಓರ್ವ ಅನಕ್ಷಸ್ಥರನಿಗೂ ಅರ್ಥವಾಗುತ್ತದೆ ಎಂದು ತಿಳಿಸಿದ್ದಾರೆ.







