ಮಳೆಗೆ ಜಲಾವೃತವಾದ ಯಾದಗಿರಿಯ ಲುಂಬಿನಿ ಉದ್ಯಾನವನ

ಯಾದಗಿರಿ: ನಗರದ ಹೃದಯ ಭಾಗದಲ್ಲಿರುವ ಲುಂಬಿನಿ ಉದ್ಯಾನವನ ಕಳೆದ ಮೂರು ದಿನಗಳಿಂದ ನಿರಂತರ ಸುರಿಯುತ್ತಿರುವ ಭಾರೀ ಮಳೆಗೆ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಸುತ್ತಮುತ್ತಲಿನ ನಗರ ಪ್ರದೇಶಗಳಿಂದ ಹರಿದು ಬಂದ ನೀರು ನೇರವಾಗಿ ಉದ್ಯಾನವನಕ್ಕೆ ನುಗ್ಗಿದ್ದು, ಅಲ್ಲಿ ಅಳವಡಿಸಿದ್ದ ಮಕ್ಕಳ ಆಟಿಕೆ ಸಾಮಗ್ರಿಗಳು ಹಾಗೂ ಅಲಂಕಾರಿಕ ಸಸ್ಯಗಳು ನೀರಿನಲ್ಲಿ ಮುಳುಗಿ ಹಾನಿಗೊಳಗಾಗಿವೆ.
ನಗರದ ಏಕೈಕ ಸಾರ್ವಜನಿಕ ಉದ್ಯಾನವಾಗಿರುವ ಲುಂಬಿನಿ ಪಾರ್ಕ್, ಕುಟುಂಬ ಸಮೇತರಾಗಿ ಸಮಯ ಕಳೆಯಲು ಹಾಗೂ ಮಕ್ಕಳಿಗೆ ಮನರಂಜನೆ ನೀಡುವ ಪ್ರಮುಖ ಸ್ಥಳವಾಗಿತ್ತು. ಆದರೆ ಇದೀಗ ಸಂಪೂರ್ಣ ಜಲಾವೃತಗೊಂಡಿರುವುದರಿಂದ ನಾಗರಿಕರಲ್ಲಿ ನಿರಾಸೆ ಮೂಡಿದೆ.
ಉದ್ಯಾನವನದ ಸುತ್ತಮುತ್ತ ನೀರು ನಿಂತಿರುವುದರಿಂದ ಆರೋಗ್ಯ ಹಾನಿಯ ಭೀತಿ ವ್ಯಕ್ತವಾಗಿದೆ. ಸ್ಥಳೀಯರು ತಕ್ಷಣವೇ ನೀರು ಹೊರಹಾಕುವ ವ್ಯವಸ್ಥೆ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇಲ್ಲದಿದ್ದರೆ ಉದ್ಯಾನವನದ ಹಸಿರು ಸಸ್ಯಗಳು ನಾಶವಾಗುವ ಭೀತಿ ಹಾಗೂ ಆಟೋಪಕರಣಗಳು ಶಾಶ್ವತ ಹಾನಿಗೊಳಗಾಗುವ ಆತಂಕ ವ್ಯಕ್ತವಾಗಿದೆ.
Next Story





