ಫೆ. 26ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ: ಡಾ. ಭೀಮಣ್ಣ ಮೇಟಿ

ಡಾ. ಭೀಮಣ್ಣ ಮೇಟಿ
ಯಾದಗಿರಿ: ಕನಕ ಗುರುಪೀಠ ತಿಂಥಣಿ ಬ್ರೀಡ್ಜ್ ಶ್ರೀ ಕಾಗಿನೆಲೆ ಮಹಾಸಂಸ್ಥಾನ ವತಿಯಿಂದ ಸಾಮೂಹಿಕ ವಿವಾಹ ಮಹೋತ್ಸವ ಮತ್ತು ಮಹಾಶಿವರಾತ್ರಿ ಜಾಗರಣೆ ಕಾರ್ಯಕ್ರಮ ಫೆ. 26ರಂದು ನಡೆಯಲಿದೆ ಎಂದು ಕನಕ ಗುರುಪೀಠ ತಿಂಥಣಿ ಬ್ರೀಡ್ಜ್ನ ಶ್ರೀ ಕಾಗಿನೆಲೆ ಮಹಾಸಂಸ್ಥಾನದ ಧರ್ಮದರ್ಶಿ ಡಾ. ಭೀಮಣ್ಣ ಮೇಟಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಂದು ಮಧ್ಯಾಹ್ನ 12.15ಕ್ಕೆ ಸಾಮೂಹಿಕ ವಿವಾಹ ಮಹೋತ್ಸವ ನಡೆಯಲಿದೆ ಎಂದು ಹೇಳಿದರು.
ಸಾಮಾನ್ಯ ಮದುವೆಗಳು ಸೇರಿದಂತೆ ಎರಡೂ ಕುಟುಂಬಗಳು ಒಪ್ಪಿದ ಅಂತರ್ಜಾತಿ (ಮುಸ್ಲಿಂ, ಕ್ರಿಶ್ಚಿಚಿಯನ್ ಹೊರತುಪಡಿಸಿ) ಮತ್ತು ಮರು ಮದುವೆಗೆ ಅವಕಾಶವಿರುತ್ತದೆ. ವಧು-ವರರ ವಯಸ್ಸಿನ ದೃಢೀಕರಣ ದಾಖಲೆ, ಆಧಾರ್ ಕಾರ್ಡ್ ಹಾಗೂ 4 ಭಾವಚಿತ್ರಗಳನ್ನು ಸಲ್ಲಿಸಬೇಕು ಎಂದರು.
ಆಸಕ್ತರು ಫೆ. 24ರೊಳಗೆ ಶ್ರೀಮಠಕ್ಕೆ ಆಗಮಿಸುವ ಮೂಲಕ ಹೆಸರು ನೋಂದಾಹಿಸಿಕೊಳ್ಳಬೇಕು. ಮಧು ಮಕ್ಕಳಿಗೆ ಮಾಂಗಲ್ಯ ವಸ್ತ್ರದಾನ ನೀಡಲು ಅವಕಾಶವಿರುತ್ತದೆ ಎಂದು ತಿಳಿಸಿದರು.
ಇದಾದ ಬಳಿಕ ರಾತ್ರಿ 9ರಿಂದ ಸಾಮೂಹಿಕ ಧ್ಯಾನ, ಶಿವಾಷ್ಟೋತ್ತರ ಶತನಾಮ ಜಪ, ಪ್ರಾರ್ಥನೆ ನಡೆಯಲಿದೆ ಎಂದು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ ಮೊ. 6363571270 ಸಂಪರ್ಕಿಸಬಹುದು ಎಂದು ತಿಳಿಸಿದರು.





