ಯಾದಗಿರಿ | ಸಚಿವ ಪ್ರಿಯಾಂಕ್ ಖರ್ಗೆ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ಕಣ್ಣಿನ ತಪಾಸಣೆ, ರಕ್ತದಾನ ಶಿಬಿರ

ಯಾದಗಿರಿ: ಸಾಮಾಜಿಕ ಪ್ರಬುದ್ಧತೆ ಮೈಗೂಡಿಸಿಕೊಂಡು ಚಿಕ್ಕ ವಯಸ್ಸಿನಲ್ಲಿಯೇ ಶಾಸಕ, ಸಚಿವರಾಗಿ ಅಭಿವೃದ್ಧಿ ಕೆಲಸಗಳು ಮಾಡುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಂಬರುವ ದಿನಗಳಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಂತೆಯೇ ಉನ್ನತ ಸ್ಥಾನಗಳು ಪಡೆಯಲಿ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಆಶಯ ವ್ಯಕ್ತಪಡಿಸಿದರು.
ಗಾಂಧಿ ಸರ್ಕಲ್ ನಲ್ಲಿ ಶನಿವಾರ ಸಚಿವರ ಹುಟ್ಟುಹಬ್ಬದಂಗವಾಗಿ ಏಪರ್ಡಿಸಿದ್ದ ಉಚಿತ ಕಣ್ಣಿನ ತಪಾಸಣೆ ಹಾಗೂ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬುದ್ಧ, ಬಸವ, ಡಾ.ಅಂಬೇಡ್ಕರ್ ಅವರ ಆದರ್ಶ, ತತ್ವಗಳನ್ನು ಚಾಚು ತಪ್ಪದೆ ಪಾಲಿಸುವ ಮೂಲಕ ಸತ್ಯ, ನ್ಯಾಯ ಮತ್ತು ಧರ್ಮದ ದಾರಿಯಲ್ಲಿ ಕೆಲಸ ಮಾಡುತ್ತಿರುವ ಬೆರಳೆಣಿಕೆಯಷ್ಟು ಜನರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಒಬ್ಬರಾಗಿದ್ದಾರೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಅನಪುರ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯ ಕಂಡ ಓರ್ವ ಪ್ರತಿಭಾವಂತ ರಾಜಕಾರಣಿಯಾಗಿದ್ದು, ಅಭಿವೃದ್ಧಿ ವಿಷಯದಲ್ಲಿ ರಾಜಿಯಾಗದ ಗಟ್ಟಿ ನಿಲುವಿನ ವ್ಯಕ್ತಿಯೆಂದು ಹೇಳಿದರು.
ಯುವ ನಾಯಕ ಪಂಪಣ್ಣಗೌಡ (ಸನ್ನಿಗೌಡ) ಅವರ ನೇತೃತ್ವದಲ್ಲಿ ಪೌರಾ ಕಾರ್ಮಿಕರಿಗೆ ಸನ್ಮಾನ, ರಕ್ತದಾನ ಶಿಬಿರ, ಕಣ್ಣಿನ ತಪಾಸಣೆ ಹಾಗೂ ಅನ್ನ ಸಂತಪರ್ಣೆ ನಡೆಯಿತು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ. ಭೀಮಣ್ಣ ಮೇಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಕಾಡ್ಲೂರ್, ಬಸ್ಸುಗೌಡ ಬಿಳ್ಹಾರ್, ಸಾಯಿಬಣ್ಣ ಕೆಂಗೂರಿ, ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಮಲ್ಲಮ್ಮ ಕೋಮಾರ್, ನಿಲೋಫರ ಬಾದಲ್, ಮಲ್ಲಿಕಾರ್ಜುನ ಇಟೆ, ಶರಣಪ್ಪ ಡಿ ಮಾನೇಗಾರ್, ಲಕ್ಣ್ಮರೆಡ್ಡಿ, ರಾಘವೇಂದ್ರ ಮಾನಸಗಲ್, ಅನಿಲಕುಮಾರ ಹೆಡಗಿಮದ್ರಿ, ಹಣುಮೇಗೌಡ ಮರಮಕಲ್, ಚಿದಾನಂದಪ್ಪ ಕಾಳೆಬೆಳಗುಂದಿ, ಸುದರ್ಶನ್ ನಾಯಕ್, ಸುರೇಶ್ ಮಡ್ಡಿ, ಭೀಮರಾಯ ಠಾಣಗುಂದಿ, ಶರಣಗೌಡ ಮಾಲಿಪಾಟೀಲ್, ಶ್ಯಾಮಸನ್ ಮಾಳಿಕೇರಿ, ಮಲ್ಲಣ್ಣ ದಾಸನಕೇರಿ, ಸಾಯಿಬಣ್ಣ ಸೈದಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.







