ಸುರಪುರ: ಭೂಮಿ ಮಂಜೂರು ಮಾಡಲು ಡಿಸಿಎಂ ಪರಮೇಶ್ವರ, ಪ್ರಿಯಾಂಕ್ ಖರ್ಗೆಗೆ ಮನವಿ

ಸುರಪುರ: ಯಾದಗಿರಿ ಭೂಮಿ ಮಂಜೂರು, ಸುರಪುರದ ಬುದ್ಧ ವಿಹಾರದ ಭೂಮಿ ಮಂಜೂರು ಹಾಗೂ ಗುರುಮಠಕಲ್ ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿ ಮಂಜೂರು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣ ದಿಂದ ಬೆಂಗಳೂರಲ್ಲಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ್, ಸಚಿವ ಕೆ.ಎಚ್ ಮುನಿಯಪ್ಪ, ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.
ಮನವಿ ಸ್ವಿಕರಿಸಿ ಯಾದಗಿರಿಯ ಜಿಲ್ಲಾದಿಕಾರಿಗಳಿಗೆ ಮಂಜೂರಿ ಮಾಡುವಂತೆ ಪತ್ರ ಬರೆದು ಆದೆಶ ಮಾಡುವುದಾಗಿ ಸಚಿವರು ಭರವಸೆ ಕೊಟ್ಟಿದ್ದಾರೆ ಎಂದು ಸಂಘದ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ತಿಳಿಸಿದ್ದಾರೆ.
ನೀಯೋಗದಲ್ಲಿ ಸಂಘಟನೆಯ ರಾಜ್ಯ ಸಂಚಾಲಕ ಅರ್ಜುನ ಬದ್ರೆ, ಗುರುಮಿಠಕಲ್ ತಾಲೂಕ ಸಂಚಾಲಕ ಆನಂದ ಭಜಂತ್ರಿ, ಸಂಘಟನಾ ಸಂಚಾಲಕ ಮಹೇಂದ್ರ ತಾತಳಗೇರಿ, ನಬಿಲಾಲ ಗೋಪಾಳಪುರ, ಸುರಪುರ ತಾಲುಕಾ ಹಿರಿಯ ನಾಯಕ ಬಸವರಾಜ ಬೊಮ್ಮನಹಳ್ಳಿ ಇದ್ದರು.
Next Story




