ಬೆಂಕಿ ಅವಘಡದಿಂದ ಹಾನಿಗೊಳಗಾದ ರೈತರ ಹೊಲಕ್ಕೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಭೇಟಿ

ಯಾದಗಿರಿ: ತಾಲೂಕಿನ ನಾಯಕಲ್ ಗ್ರಾಮದ ಖಾಸಿಂಸಾಬ್ ಹೊರಕೂರ ಅವರಿಗೆ ಸೇರಿದ ಕೃಷಿ ಜಮೀನಿನಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ ಕಣಕಿ, ಹೊಟ್ಟು, ಮೇವು ಹಾಗೂ ಪೈಪ್‌ಲೈನ್ ಸಾಮಗ್ರಿಗಳು ಸುಟ್ಟು ಹಾನಿಗೊಳಗಾದ ಸ್ಥಳಕ್ಕೆ ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ರವಿವಾರ ಭೇಟಿ ನೀಡಿ ಪರಿಶೀಲಿಸಿದರು.
ಹೊಲದ ಮಾಲೀಕ ಖಾಸಿಂಸಾಬ್ ಹೊರಕೂರ ಅವರೊಂದಿಗೆ ಮಾತನಾಡಿದ ಶಾಸಕರು, ಬೆಂಕಿ ಅವಘಡದ ಕುರಿತು ಮಾಹಿತಿ ಪಡೆದು, ಹಾನಿಗೊಳಗಾದ ವಸ್ತುಗಳ ವಿವರವನ್ನು ಪರಿಶೀಲಿಸಿದರು. ಸರ್ಕಾರದಿಂದ ಸೂಕ್ತ ಪರಿಹಾರ ದೊರಕುವಂತೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಡಗೇರಾ ತಹಸೀಲ್ದಾರ್, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ವಡಗೇರಾ ತಾಲೂಕು ಅಧ್ಯಕ್ಷ ಖಾಜಾ ಮೈನೋದ್ದಿನ್ ಮಿರ್ಚಿ, ಜಾವೇದ್ ನಾಯಕಲ್, ಶರಣಗೌಡ, ಮರೆಪ್ಪ ಬಿಳ್ಹಾರ, ಮಲ್ಲಣ್ಣಗೌಡ ಗೊಸ್ವಾಮಿ, ಭಾಷುಮಿಯ್ಯ ಹೊನಳ್ಳಿ, ರಸೂಲಸಾಬ್ ಬಾರಕೇರ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
Next Story




