ಯಾದಗಿರಿ | ಸರಕಾರ ಮೊದಲು ವಕ್ಫ್ ಆಸ್ತಿಯನ್ನು ಉಳಿಸಿಕೊಳ್ಳಲಿ : ಶರಣಗೌಡ ಕಂದಕೂರು

ಯಾದಗಿರಿ : ಕಾಂಗ್ರೆಸ್ ಸರಕಾರ ಮೊದಲು ವಕ್ಫ್ ಆಸ್ತಿಯನ್ನು ಉಳಿಸಿಕೊಳ್ಳಲಿ. ಅದು ಬಿಟ್ಟು ವಿಜಯಪುರ ರೈತರ ಭೂಮಿಯನ್ನು ವಕ್ಫ್ ಆಸ್ತಿ ಅಂತ ಸೇರಿಸುವ ಕೆಲಸ ಮಾಡಿ, ಒಂದು ಸಮುದಾಯವನ್ನು ಓಲೈಕೆ ಮಾಡುವ ಕೆಲಸ ಮಾಡುತ್ತಿದೆ ಎಂದು ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾದಗಿರಿಯ ಜಿಲ್ಲಾಡಳಿತ ಭವನದ ಸುತ್ತಲೂ ಇರುವ ವಕ್ಫ್ ಆಸ್ತಿಯನ್ನು ಪ್ರಭಾವಿಗಳು ಲೂಟಿ ಮಾಡಿದ್ದು, ಸರಕಾರ ಈ ಆಸ್ತಿ ಉಳಿಸಿಕೊಳ್ಳಲಿ. ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತುತ್ತೇನೆ ಎಂದು ತಿಳಿಸಿದರು.
ಅನೇಕ ಸಲ ಅಭಿವೃದ್ಧಿ ಕಾಮಗಾರಿ ಆಗುತ್ತಿಲ್ಲ ಎಂದು ಸರಕಾರ ಬಿದ್ದಿರುವ ಉದಾಹರಣೆ ಇವೆ. ಸಿದ್ದರಾಮಯ್ಯ ಎಲ್ಲಿಯವರಗೆ ಇರುತ್ತಾರೋ ಅಲ್ಲಿವರಗೆ ಕಾಂಗ್ರೆಸ್ ಸರಕಾರ ಇರುತ್ತದೆ. ಅವರು ಅಧಿಕಾರದಿಂದ ಇಳಿದ ಮೇಲೆ ಸರಕಾರಕ್ಕೆ ಕೊನೆ ಮೊಳೆ ಹೊಡೆಯುತ್ತಾರೆ ಎಂದರು.
Next Story





