ಯಾವುದೇ ಧರ್ಮ ಮನುಷ್ಯನಿಗೆ ಕೆಡುಕು ಬಯಸುವುದಿಲ್ಲ: ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು

ಯಾದಗಿರಿ : ಯಾವುದೇ ಧರ್ಮಗಳು ಮನುಷ್ಯನಿಗೆ ಕೆಡುಕು ಮಾಡಲು ಬಯಸುವುದಿಲ್ಲ ದೇವ ಒಬ್ಬ ನಾಮ ಹಲವು ಹೀಗಾಗಿ ಈಗಿನ ಯುವಕರು ಇದನ್ನು ತಿಳಿದುಕೊಂಡು ಬದುಕಬೇಕಾಗಿದೆ. ಮನುಷ್ಯರನ್ನು ಮನುಷ್ಯರನ್ನಾಗಿ ನೋಡಿದಾಗ ಮಾತ್ರವೇ ಆ ಧರ್ಮ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಎಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು.
ನಗರದ ಈಡನ್ ಗಾರ್ಡನ ಫಂಕ್ಷನ್ ಹಾಲ್ ಮೈದಾನದಲ್ಲಿ ನಡೆದ ಜಮಾಅತೆ ಇಸ್ಲಾಮಿ ಹಿಂದ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ʼಮಾನವ ಘನತೆ ಮತ್ತು ಜೀವನದ ಉದ್ದೇಶʼ ವಿಷಯ ಕುರಿತು ಕನ್ನಡದಲ್ಲಿ ಸಾರ್ವಜನಿಕ ಕುರ್ ಆನ್ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತಂಹ ಸರ್ವಧರ್ಮ ಸಮ್ಮೇಳನಗಳ ಮಾಡುವುದರಿಂದ ನಮ್ಮಲ್ಲಿ ಭಾವೈಕ್ಯತೆ ಬೆಳೆಯುತ್ತದೆ, ಪ್ರತಿಯೊಬ್ಬರು ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು
ದೇವರು ಮಾನವನ ರೂಪದಲ್ಲಿ ಬದುಕಲು ಅವಕಾಶ ಮಾಡಿಕೊಟ್ಟಿದ್ದಾನೆ ನಾವೆಲ್ಲರೂ ಸಹನೆ, ಸಹಬಾಳ್ವೆ, ಸಹೋದರತ್ವದಿಂದ ಬದುಕಬೇಕು ಎಲ್ಲಾ ಧರ್ಮಗಳ ಸಾರಾಂಶ ಒಂದೇಯಾಗಿದೆ. ಆದರೆ ಇತ್ತೀಚಿಗೆ ರಾಜಕೀಯ ಲಾಭಕ್ಕಾಗಿ ಮಸೀದಿ ಮಂದಿರಗಳನ್ನು ಬಳಸಿಕೊಂಡು ರಾಜಕೀಯ ಮಾಡುವುದು ವಿಷಾದನೀಯವಾಗಿದೆ ಎಂದರು.
ಎಲ್ಲಾ ಧರ್ಮಿಯರು ಸ್ವತಂತ್ರದಲ್ಲಿ ಹೋರಾಡಿ ದೇಶ ಕಟ್ಟಿದ್ದಾರೆ. ಸೂಫಿಗಳು, ಸಂತರು, ಶರಣರು ಸೇರಿಕೊಂಡು ಈ ದೇಶವನ್ನು ಕಟ್ಟಿದ್ದಾರೆ. ಯುವಕರು ಜಾತಿ ಧರ್ಮ ಎಂದು ಕಚ್ಚಾಡದೆ ಒಗ್ಗೂಟಿನಿಂದ ಇರಬೇಕು. ದೇಶದಲ್ಲಿ ಧಾರ್ಮಿಕ ಕೇಂದ್ರಗಳು ಸೌಹಾರ್ದತೆಯ ಸಂಕೇತವಾಗಿವೆ ಎಂದು ಹೇಳಿದರು.
ನಂತರ ರಾಜ್ಯದ ಪ್ರಸಿದ್ಧ ಕನ್ನಡ ಪ್ರವಚನಾಕಾರಾದ ಜನಾಬ್ ಮುಹಮ್ಮದ್ ಕುಂಞಿ ಅವರು ಮಾತನಾಡಿ, ಯಾವ ವಿಷಯದ ಬಗ್ಗೆ ನಿಮಗೆ ತಿಳವಳಿಕೆ ಇಲ್ಲವೋ ಆ ವಿಷಯದ ಬಗ್ಗೆ ನೀವು ಶತ್ರುಗಳಾಗುತ್ತಿರಿ, ಯಾವುದರ ಬಗ್ಗೆ ನಿಮಗೆ ಅರಿವು ಇಲ್ಲವೋ ನೀವು ಅದರ ವೈರಿಗಳಾಗುತ್ತಿರಿ, ಮನುಷ್ಯನಲ್ಲಿ ತಿಳುವಳಿಕೆ ಇದ್ದಾಗ ಅಪನಂಬಿಕೆಗಳು ಮೂಡನಂಬಿಕೆಗಳು ದೂರವಾಗುತ್ತವೆ. ಕುರಾನ್ ಹೇಳುತ್ತದೆ ಒಳಿತು ಮತ್ತು ಕೆಡಕು ಇವು ಎರಡು ಸಮಾನ ಅಲ್ಲ ಕೆಡುಕುಗಳನ್ನು ಒಳಿತುಗಳ ಮೂಲಕ ನಿವಾರಿಸಬೇಕು ಆದರೆ ವಿದ್ವೇಷದಿಂದ ಅಪನಂಬಿಕೆಯಿಂದ ಅಗೆತನದಿಂದ ಆಲಿಸುತ್ತಾ ಹೋದರೆ ಖಂಡಿತವಾಗಿಯೂ ನಮ್ಮ ಮಕ್ಕಳು ಒಳ್ಳೆಯವರಾಗಲು ಸಾದ್ಯವಿಲ್ಲ ಎಂದು ಹೇಳಿದರು.
ಈ ಪ್ರವಚನ ಕಾರ್ಯಕ್ರಮದಲ್ಲಿ, ನಿರಗುಡಿ ಬಸವಕಲ್ಯಾನದ ಹವಾ ಮಲ್ಲಿನಾಥ ಮಹಾರಾಜ, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷರಾದ ಡಾ.ಬೆಳಗಾಮಿ ಮುಹಮ್ಮದ್ ಸಾದ್, ಜಮಾಅತೆ ಇಸ್ಲಾಮಿ ಹಿಂದ ಸಮಿತಿಯ ಯಾದಗಿರಿ ಜಿಲ್ಲಾಧ್ಯಕ್ಷ ಮುಹಮ್ಮದ್ ಮಿನ್ಹಾಜುದ್ದೀನ್ ಸಾಮಾಜಿಕ ಹೋರಾಟಗಾರ ಉಮೇಶ್ ಕೆ ಮುದ್ನಾಳ, ಕಾಂಗ್ರೆಸ್ ಮುಖಂಡ ಭೀಮಣ್ಣ ಮೇಟಿ, ಧಮ್ಮಚಾರಿ ನಿಂಗಪ್ಪ ಕೊಲ್ಲೂರಕರ್, ಸಿದ್ದಪ್ಪ ಹೊಟ್ಟಿ, ದಲಿತ ಮುಖಂಡ ಮರೆಪ್ಪ ಚಟ್ಟೇರಕರ್, ಡಾ. ಭಗವಂತ ಅನ್ವಾರ, ನಾಗರತ್ನ ಅನಪೂರ, ಸಾನಿ ಅಧ್ಯಕ್ಷ ಗುಲಾಮ್ ಮೈಹಿಬೂಬ್, ಅಥರುಲ್ಲಾಹ್ ಶರೀಫ್, ರಾಜ್ಯ ಸಲಹಾ ಸಮಿತಿ ಸದಸ್ಯರು, ಜಮಾತೆ ಇಸ್ಲಾಮಿ ಹಿಂದ್, ಗುಲಾಂ ಮೆಹಬೂಬ್, ಸ್ಥಾನೀಯ ಅಧ್ಯಕ್ಷರು, ಸೇರಿದಂತೆ ಅನೇಕರು ಇದ್ದರು.







