ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಯಾದಗಿರಿ ಜಿಲ್ಲೆಯಲ್ಲಿ ಶೇ. 90.79ರಷ್ಟು ಮತದಾನ

ಯಾದಗಿರಿ: ಕರ್ನಾಟಕ ಉತ್ತರ-ಪೂರ್ವ ಶಿಕ್ಷಕರ ಕ್ಷೇತ್ರದ 2026ರ ಚುನಾವಣೆಯ ಮತದಾನ ಶುಕ್ರವಾರ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಯಾದಗಿರಿ ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆಯಿತು. ಜಿಲ್ಲೆಯಲ್ಲಿ ಒಟ್ಟು ಶೇ. 90.79ರಷ್ಟು ಮತದಾನ ದಾಖಲಾಗಿದೆ ಎಂದು ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಒಟ್ಟು 2,259 ಮತದಾರರಿದ್ದು, ಇವರಲ್ಲಿ 1,548 ಪುರುಷರು ಹಾಗೂ 711 ಮಹಿಳೆಯರು ಇದ್ದರು. ಅಂತಿಮವಾಗಿ ಒಟ್ಟು ಶೇ. 90.79ರಷ್ಟು ಮತದಾನವಾಗಿದೆ. ಪುರುಷ ಮತದಾರರಲ್ಲಿ ಶೇ. 92.64 ಹಾಗೂ ಮಹಿಳಾ ಮತದಾರರಲ್ಲಿ ಶೇ. 86.78ರಷ್ಟು ಮತದಾನ ದಾಖಲಾಗಿದೆ.
ಶಹಾಪುರ ತಹಶೀಲ್ದಾರ್ ಕಚೇರಿ ಕಟ್ಟಡದ ಮತಗಟ್ಟೆ ಸಂಖ್ಯೆ 100ರಲ್ಲಿ ಒಟ್ಟು 631 ಮತದಾರರ ಪೈಕಿ 561 ಮಂದಿ ಮತ ಚಲಾಯಿಸಿದ್ದು, ಶೇ. 88.91ರಷ್ಟು ಮತದಾನವಾಗಿದೆ. ಶೋರಾಪುರ ತಹಶೀಲ್ದಾರ್ ಕಚೇರಿ ಕಟ್ಟಡದ ಮತಗಟ್ಟೆ ಸಂಖ್ಯೆ 101ರಲ್ಲಿ 436 ಮತದಾರರ ಪೈಕಿ 406 ಮಂದಿ ಮತ ಚಲಾಯಿಸಿದ್ದು, ಶೇ. 93.12ರಷ್ಟು ಮತದಾನ ದಾಖಲಾಗಿದೆ.
ಹುಣಸಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 102ರಲ್ಲಿ ಒಟ್ಟು 98 ಮತದಾರರ ಪೈಕಿ 92 ಮಂದಿ ಮತ ಚಲಾಯಿಸಿದ್ದು, ಶೇ. 93.88ರಷ್ಟು ಮತದಾನವಾಗಿದೆ. ಕೆಂಭಾವಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಮತಗಟ್ಟೆ ಸಂಖ್ಯೆ 103ರಲ್ಲಿ ಶೇ. 92.79ರಷ್ಟು ಮತದಾನ ದಾಖಲಾಗಿದೆ.
ವಡಗೇರಾ ಸರ್ಕಾರಿ ಪ್ರೌಢಶಾಲೆಯ ಮತಗಟ್ಟೆ ಸಂಖ್ಯೆ 104ರಲ್ಲಿ ಶೇ. 86ರಷ್ಟು ಮತದಾನವಾಗಿದ್ದರೆ, ಕೋಡೆಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 105ರಲ್ಲಿ ಶೇ. 91.67ರಷ್ಟು ಮತದಾನ ದಾಖಲಾಗಿದೆ.
ಯಾದಗಿರಿ ತಹಶೀಲ್ದಾರ್ ಕಚೇರಿ ಕಟ್ಟಡದ ಮತಗಟ್ಟೆ ಸಂಖ್ಯೆ 106ರಲ್ಲಿ ಒಟ್ಟು 573 ಮತದಾರರ ಪೈಕಿ 518 ಮಂದಿ ಮತ ಚಲಾಯಿಸಿದ್ದು, ಶೇ. 90.40ರಷ್ಟು ಮತದಾನವಾಗಿದೆ. ಗುರುಮಠಕಲ್ ತಹಶೀಲ್ದಾರ್ ಕಚೇರಿ ಕಟ್ಟಡದ ಮತಗಟ್ಟೆ ಸಂಖ್ಯೆ 107ರಲ್ಲಿ ಶೇ. 92.02ರಷ್ಟು ಮತದಾನ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ತಿಳಿಸಿದ್ದಾರೆ.
See also : https://www.varthabharati.in/karnataka/dot-times-mangalore-news-today-section-2284977






