ಕ್ರೀಡಾಂಗಣದಲ್ಲಿ ಗೆಲುವಿನ ಆಶಯದೊಂದಿಗೆ ಸ್ಪರ್ಧೆಯಿರಲಿ: ರಾಜುಗೌಡ

ಕೊಡೇಕಲ್: ಕ್ರೀಡಾಪಟುಗಳು ಕ್ರೀಡಾ ಮನೋಭಾವದೊಂದಿಗೆ ಸ್ಪರ್ಧಿಸಿ, ನಿಯಮಗಳನ್ನು ಪಾಲಿಸುವ ಮೂಲಕ ಗೆಲುವು ಸಾಧಿಸಿದಾಗ ಅದುವೇ ಕ್ರೀಡಾಪಟುತ್ವಕ್ಕೆ ಸಲ್ಲಿಸುವ ಗೌರವವಾಗಿದೆ ಎಂದು ಮಾಜಿ ಸಚಿವ ನರಸಿಂಹನಾಯಕ (ರಾಜುಗೌಡ) ಹೇಳಿದರು.
ಪಟ್ಟಣದ ಕೆಬಿಜೆಎನ್‌ಎಲ್ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ತಮ್ಮ ಪುತ್ರ ಹಾಗೂ ಯುವ ಚಿತ್ರನಟ ಮಣಿಕಂಠನಾಯಕ ಅವರ 21ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಉತ್ತರ ಕರ್ನಾಟಕ ಭಾಗದ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಟೂರ್ನಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಮೂಲಕ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಿಗೆ ಈ ಕ್ರೀಡಾಂಗಣ ಪೂರಕವಾಗಬೇಕು. ಇಲ್ಲಿನ ಕ್ರೀಡಾಪಟುಗಳು ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಮಟ್ಟದಲ್ಲಿ ಸಾಧನೆ ಮಾಡಬೇಕು. ದೊಡ್ಡ ಮಟ್ಟದ ಕ್ರೀಡಾಕೂಟಗಳು ಕೊಡೇಕಲ್‌ನಲ್ಲಿ ನಡೆಯುವಂತಾಗಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ರಾಜಾ ಜಿತೇಂದ್ರನಾಯಕ ಜಾಹಗೀರದಾರ, ರಾಜಾ ಕುಶಾಲನಾಯಕ ಜಾಹಗೀರದಾರ, ಹಣಮಂತನಾಯಕ (ಬಬಲುಗೌಡ), ಡಾ. ಬಿ.ಎಂ. ಅಳ್ಳಿಕೋಟಿ, ರಂಗನಾಥ ದೊರಿ, ವಿ.ಎಸ್.ಹಾವೇರಿ, ಮಲ್ಲು ನವಲಗುಡ್ಡ, ಸಂಗಮೇಶ ಹೂಗಾರ, ದೇವು ಗೋಪಾಳಿ, ಹಿರಿಯ ಪತ್ರಕರ್ತ ಬಸವರಾಜ ಅಂಗಡಿ, ನಿವೃತ್ತ ಶಿಕ್ಷಕ ಚಂದ್ರಶೇಖರ ಹೊಕ್ರಾಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪತ್ರಕರ್ತ ಪವನ ದೇಶಪಾಂಡೆ ನಿರೂಪಿಸಿದರು. ಪ್ರಶಾಂತ ಪತ್ತಾರ ಸ್ವಾಗತಿಸಿದರು. ರಾಜು ಹಳ್ಳದಮನಿ ವಂದಿಸಿದರು.




