ಶಹಾಪುರ | ಸಂಭ್ರಮದ ಈದುಲ್ ಫಿತ್ರ್ ಆಚರಣೆ

ಶಹಾಪುರ: ನಗರದ ಗುಲ್ಬರ್ಗ ರಸ್ತೆ ಹತ್ತಿರದ ಹಳೆ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
ಹಬ್ಬದ ಅಂಗವಾಗಿ ಬೆಳಿಗ್ಗೆ ಮಕ್ಕಳು, ಹಿರಿಯರು, ಸ್ನೇಹಿತರು ಹಾಗೂ ಬಂಧು-ಬಳಗದವರು ಮಸ್ಜಿದ್ ಮತ್ತು ಈದ್ಗಾಗಳಿಗೆ ತೆರಳಿ ಭಕ್ತಿಭಾವದಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಹಸ್ತಲಾಘವ ಮತ್ತು ಅಪ್ಪಿಕೊಂಡು ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಈದ್ ಹಬ್ಬವು ಪರಸ್ಪರ ಸ್ನೇಹ, ಸೌಹಾರ್ದತೆ ಮತ್ತು ಬಾಂಧವ್ಯವನ್ನು ಗಟ್ಟಿಗೊಳಿಸುವ ಹಬ್ಬವಾಗಿದ್ದು, ಎಲ್ಲರೂ ಸಂತೋಷದಿಂದ ಆಚರಿಸಿದರು.
Next Story




