ಶಹಾಪುರ | ಆ.29 ರಂದು ಗುತ್ತಿಗೆದಾರರ ಸಮಸ್ಯೆ ಬಗೆಹರಿಸಲು ಸಿಎಂಗೆ ಮನವಿ

ಶಹಾಪುರ: ಕಲ್ಯಾಣ ಕರ್ನಾಟಕದಾದ್ಯಂತ ಗುತ್ತಿಗೆದಾರರು ಬಿಲ್ ಪಾವತಿಯಾಗದೇ ವಿವಿಧ ಸಮಸ್ಯೆ ಎದುರಿಸುತ್ತಿದ್ದು, ಅವುಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿ ಆ.29 ರಂದು ಗುತ್ತಿಗೆದಾರರ ಸಂಘದ ರಾಜ್ಯಧ್ಯಕ್ಷರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲು ಸಭೆ ಮಾಡಿ ನಿರ್ಣಯಿಸಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಗುತ್ತಿಗೆದಾರರೆಲ್ಲರು ಸಭೆ ಮಾಡಿ ನಿರ್ಣಯ ತೆಗೆದುಕೊಳ್ಳಲಾಯಿತು.
ಸದ್ಯ ಕಾಮಗಾರಿಗಳಿಗೆ ಕೈಯಿಂದ ಬಂಡವಾಳ ಹೂಡಿ ಗುತ್ತಿಗೆದಾರರು ಸಾವಿನಂಚಿನಲ್ಲಿದ್ದಾರೆ. ಸರ್ಕಾರದಲ್ಲಿ ಕಾಮಗಾರಿಗೆ ಪೂರ್ಣ ಹಣ ಇದ್ದರೆ ಮಾತ್ರ ಟೆಂಡರ್ ಕರೆಯಬೇಕು. ಟೆಂಡರ್ ಅವಧಿ ನಿರ್ಧರಿಸುವಾಗ ಮೊತ್ತ, ಕಾಮಗಾರಿ ಸ್ಥಳ, ಕಚ್ಚಾ ಸಾಮಗ್ರಿಗಳ ಲಭ್ಯತೆ ಮತ್ತು ಮಳೆಗಾಲ ಎಲ್ಲಾದರ ಅಂಶಗಳನ್ನು ಪರಿಗಣಿಸಿ ಕಾಮಗಾರಿ ನಿರ್ವಹಿಸುವ ಅವಧಿ ನಿರ್ಧರಿಸಬೇಕು. ಗುತ್ತಿಗೆದಾರರ ಯಾವುದೇ ತಪ್ಪು ಇಲ್ಲದಿದ್ದರೂ ಬೇರೆ ಸಮಸ್ಯೆಗಳಿಂದ ಕಾಮಗಾರಿ ನಿರ್ವಹಣೆ ಸಮಯ ಮೀರಿದರು ಗುತ್ತಿಗೆದಾರರಿಗೆ ದಂಡ ವಿಧಿಸುತ್ತಿದ್ದಾರೆ. ಗುತ್ತಿಗೆದಾರರಿಗೆ ಹಿಂಸೆ ಹೆಚ್ಚಾಗಿದೆ. ಆದ್ದರಿಂದ ಎಲ್ಲಾ ಗುತ್ತಿಗೆದಾರರು ಒಗ್ಗಾಟ್ಟಾಗಿ ಕೈಜೋಡಿಸಿ. ಹೋರಾಟದ ಮೂಲಕ ಮಾಡಿದ ಕಾಮಗಾರಿಗಳ ಬಿಲ್ ಪಡೆಯಬೇಕು.
ಹಲವೆಡೆ ಜೆಜೆಎಂ ಸೇರಿ ವಿವಿಧ ಇಲಾಖೆಯಡಿ ಕೈಗೊಂಡ ಕಾಮಗಾರಿಗಳು ಪೂರ್ಣಗೊಂಡು ಹಸ್ತಾಂತರಕ್ಕೆ ಸಜ್ಜಾಗಿವೆ. ಆದರೆ ಎರಡು ವರ್ಷದಿಂದ ಸರ್ಕಾರದಿಂದ ಯಾವುದೇ ಬಿಲ್ ಪಾವತಿ ಆಗಿಲ್ಲ. ಇಲಾಖೆ ಕಚೇರಿಗೆ ಹೋಗಿ ಸಪ್ಪೆ ಮೋರೆ ಹಾಕಿಕೊಂಡು ಮನೆಗೆ ಮರಳುವ ಪರಿಸ್ಥಿತಿ ಗುತ್ತಿಗೆದಾರರಿಗೆ ಇದೆ. ಸಣ್ಣ ಮತ್ತು ಹಿಂದುಳಿದ ವರ್ಗದ ಗುತ್ತಿಗೆದಾರರ ಪಾಡಂತು ಹೇಳ ತೀರದ್ದಾಗಿದೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುತ್ತಿಗೆದಾರರ ಸಂಘದ ಸಭೆ ಕರೆದು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಆಲಿಸಿ ಬಗೆಹರಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರು ಗಂಭೀರವಾಗಿ ಪರಿಗಣಿಸಿ, ಗುತ್ತಿಗೆದಾರರ ಸಮಸ್ಯೆ ಆಲಿಸಿ, ಬಿಲ್ ಪಾವತಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ. ಆ.29 ರಂದು ಅವರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಸುವರ್ಣ ಕರ್ನಾಟಕ ರಾಜ್ಯ ಗುತ್ತಿಗೆದಾರ ಸಂಘದ ರಾಜ್ಯಾಧ್ಯಕ್ಷರಾದ ಜೋಗಿ ಜಯಪ್ಪ ಹೇಳಿದರು.
ಈ ಸಂದರ್ಭದಲ್ಲಿ ಅರುಣಕುಮಾರ ಎಂ ದೊತ್ಮನಿ, ಯಮನಪ್ಪ ಪೂಜಾರಿ, ಸಣ್ಣ ಸೈದಪ್ಪ, ಸಂಗಣ್ಣ ಸೈದಾಪುರ, ಬಸವರಾಜ ನಾಟೇಕರ, ಅಂಬ್ರೇಶ ಸಜ್ಜನ್, ಭೀಮಣಗೌಡ ಗಂಗನಾಳ, ನಾಗಪ್ಪ ಎಸ್ ದೊತ್ಮನಿ, ಸೈದಪ್ಪ ಬಳಬಟ್ಟಿ, ಬಸವರಾಜ ಏವೂರ, ಬಾಪುಗೌಡ ಸಾದ್ಯಾಪುರ, ನಿಂಗಣ್ಣ ಬಾಣತಿಹಾಳ, ಯಂಕಣ್ಣ ಮೇಟಿ, ಶರಣು ಸಗರ, ಮಾಳಪ್ಪ ಕಾವತಿ, ಹರಿಶ್ಚಂದ್ರಪ್ಪ ಸಿಂಗನಹಳ್ಳಿ, ಮಂಜುನಾಥ ಬಡಿಗೇರ, ಹಣಮಂತ ಗೋಗಿ, ರಾಯಪ್ಪಗೌಡ ಸೈದಾಪುರ, ದೇವಪ್ಪ ಅಂಬಿಗರ, ಭೀಮರಾಯ ಗೌಡಿಗೇರ, ಹೊನ್ನಪ್ಪ ಅಂಬಿಗೇರ, ಸುರೇಶ ಸಗರ, ಅಂಬಣ್ಣ ಸಗರ, ಪ್ರಭುಲಿಂಗ ದಿಗ್ಗಿ, ಮಾಂತು ಚಲುವಾದಿ, ಶರಣು ಮೇಟಿ, ಮಾಂತಪ್ಪ ದೊಡ್ಮಿನಿ, ಹೈಯಾಳಪ್ಪ ಗೋಗಿ, ಮಲ್ಲಿಕಾರ್ಜುನ ಉಕ್ಕಿನಾಳ, ಅಂಬು ಸಗರ, ಭೀಮನಗೌಡ ಗಂಗನಾಳ, ಶೇಖರ ಪಾಟೀಲ್, ನಿಂಗಣ್ಣ ವಿಭೂತಿಹಳ್ಳಿ, ಬಾಪುಗೌಡ ಸಾದ್ಯಾಪುರ ಸೇರಿದಂತೆ ಗುತ್ತಿಗೆದಾರರು ಇದ್ದರು.







