ಶಹಾಪುರ | ಎರಡು ಬೈಕ್ ಗಳ ಮಧ್ಯೆ ಢಿಕ್ಕಿ; ಸ್ಥಳದಲ್ಲೇ ಸವಾರ ಮೃತ್ಯು

ಸಾಂದರ್ಭಿಕ ಚಿತ್ರ
ಯಾದಗಿರಿ/ ಶಪಾಪುರ: ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಸವಾರ ಮೃತಪಟ್ಟಿರುವ ಘಟನೆ ಗೋಗಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಹೆಗ್ಗಣದೊಡ್ಡಿ ಗ್ರಾಮದ ಪ್ರಕಾಶ ಪತ್ನಿಯೊಂದಿಗೆ ಮಕ್ಕಳನ್ನು ಕರೆದುಕೊಂಡು ಶಹಾಪುರ ನಗರಕ್ಕೆ ಗುರುವಾರ ಆಸ್ಪತ್ರೆಗೆ ತೆರಳಿದ್ದರು.
ಶಹಾಪುರದ ಗೋಗಿ ಮಾರ್ಗವಾಗಿ ಹೆಗ್ಗಣದೊಡ್ಡಿಗೆ ಬರುವ ಸಂದರ್ಭದಲ್ಲಿ ಗೋಗಿ ಗ್ರಾಮದ ಹೊರವಲಯದಲ್ಲಿ ಎರಡು ಬೈಕುಗಳು ಡಿಕ್ಕಿಯಾದ ಪರಿಣಾಮ ಪ್ರಕಾಶ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತರ ಪತ್ನಿ ಹಾಗೂ ಎರಡು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story







