ಯಾದಗಿರಿ: ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಆಚರಣೆ

ಸುರಪುರ: ತಾಲೂಕು ಆಡಳಿತದಿಂದ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಿರಸ್ತೆದಾರ ಬಸವರಾಜ ಪಾಟೀಲ್ ಭಾಗವಹಿಸಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ವಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಛತ್ರಪತಿ ಶಿವಾಜಿ ಒಬ್ಬ ಅಪ್ರತಿಮ ಹೋರಾಟಗಾರರಾಗಿದ್ದರು,ಅವರ ದೇಶಪ್ರೇಮವನ್ನು ಕಂಡು ಇಂದಿಗೂ ಹಿಂದು ಹೃದಯ ಸಾಮ್ರಾಟ ಎಂದು ಕರೆಯುತ್ತಾರೆ.ತಾಯಿ ಜೀಜಾಬಾಯಿ ಅವರಿಂದ ದೇಶಪ್ರೇಮ,ಆಡಳಿತ,ಯುದ್ಧ ಕಲೆಯನ್ನು ಕಲಿತ ಶಿವಾಜಿ ಮಹಾರಾಜರು ಅನೇಕ ಯುದ್ಧಗಳನ್ನು ಗೆದ್ದು ತನ್ನ ಸಾಮ್ರಾಜ್ಯವನ್ನು ವಿಸ್ತಿರಿಸಿಕೊಂಡಿದ್ದರು.ಅವರ ದೇಶಪ್ರೇಮ ಇಂದಿನ ಎಲ್ಲರಿಗೂ ಆದರ್ಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ರಾಮಚಂದ್ರ ಟೊಣಪೆ,ರಾಜು ಪುಲ್ಸೆ, ಧನಪಾಲ್ ಹಂಚಾಟೆ, ವಿವೇಕಾನಂದ ಶಿವಾಜಿರಾವ್, ಧೀರಜ್, ಭೀಮಾಶಂಕರ ಶಿಂಧೆ, ಬಲಭೀಮ ಸಾಳುಂಕೆ, ತುಳಜಾರಾಮ ಅಮ್ಮಾಪುರ, ಅಂಬ್ರೇಶ ಮರಾಠ ಜಾಲಿಬೆಂಚಿ, ಯಂಕೋಬ ಮಾಸ್ತರ ಪಡಕೋಟಿ, ಮುರಳಿಧರ ಅಂಬುರೆ, ಸತೀಶ ಬಾಸುತ್ಕರ್, ರಾಕೇಶ ಹಂಚಾಟೆ ಸೇರಿದಂತೆ ತಹಸಿಲ್ದಾರ್ ಕಚೇರಿಯ ಸಿರಸ್ತೆದಾರರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ನಗರದ ರಂಗಂಪೇಟೆಯ ಮಂಡಾಳಬಟ್ಟಿ ಬಳಿಯಲ್ಲನ ಶಿವಾಜಿ ಮಹಾರಾಜರ ನಾಮಫಲಕದ ಬಳಿ ಜಯಂತಿ ಆಚರಣೆ ಅಂಗವಾಗಿ ಅನೇಕರು ಭಾಗವಹಿಸಿ ಶಿವಾಜಿ ಮಹಾರಾಜರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಘೋಷಣೆಗಳನ್ನು ಕೂಗಿ ಜಯಂತಿ ಆಚರಿಸಲಾಯಿತು.ಅನೇಕ ಮುಖಂಡರು ಭಾಗವಹಿಸಿದ್ದರು.







