ಜಿಲ್ಲೆಯಾದ್ಯಂತ ಅನಾರೋಗ್ಯಕ್ಕೆ ಕಾರಣವಾಗುವ ವಿಷಕಾರಿ ದುಬೈ ಸಸಿಗಳನ್ನು ನೆಡುವುದು ಕೈಬಿಡಿ : ಬಿಎನ್‌ವಿ ಆಗ್ರಹ

ಯಾದಗಿರಿ: ನಗರದಲ್ಲಿ ಹಾಗೂ ಜಿಲ್ಲಾದ್ಯಂತ ದುಬೈ ಗಿಡ ಗಳನ್ನು ರಸ್ತೆ ವಿಭಾಜಕಗಳಲ್ಲಿ ಸೇರಿದಂತೆ ಅಲ್ಲಲ್ಲಿ ನೆಡುತ್ತಿರುವುದನ್ನು ಕೈಬಿಡಬೇಕು ಎಂದು ಜಯ ಕರ್ನಾಟಕ ಸಂಘಟನೆ ಆಗ್ರಹಿಸಿದೆ.
ಈ ಕುರಿತು ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಬಿಎನ್ ವಿಶ್ವನಾಥ ನಾಯಕ ಅವರು, ಈ ಗಿಡಗಳು ಮಾಲಿನ್ಯ ಹರಡುತ್ತಿವೆ. ವಿಷಕಾರಿ ಅಶುದ್ಧ ಗಾಳಿಯನ್ನು ಪರಿಸರಕ್ಕೆ ಬಿಡುವ ಈ ಗಿಡಗಳನ್ನು ನೆಡುವ ಕೆಲಸ ಅವೈಜ್ಞಾನಿಕ ಮತ್ತು ಅವಿವೇಕದಿಂದ ಕೂಡಿದೆ. ಇದಲ್ಲದೇ ಇತ್ತಿಚೆಗೆ ವಿವಿಧ ಜಾಗಗಳಲ್ಲಿಯೂ ಈ ಗಿಡಗಳನ್ನು ನೆಡುವ ಕೆಲಸಕ್ಕೆ ಮುಂದಾಗಿರುವ ಅರಣ್ಯ ಇಲಾಖೆ ಕಾರ್ಯ ಸಮರ್ಥನಿಯವಲ್ಲ ಎಂದು ಹೇಳಿದ ಅವರು, ಕೂಡಲೇ ಈ ಸಸಿಗಳನ್ನು ನೆಡುವುದು ಕೈಬಿಡಬೇಕು. ಬದಲಿಗೆ ಆಮ್ಲಜನಕ ಕೊಡುವ ಸಸಿಗಳನ್ನು ಮತ್ತು ಹಣ್ಣು ಹಂಪಲು ಕೊಡುವ ಸಸಿಗಳನ್ನು ನಡುವಂತೆ ಆಗ್ರಹಿಸಿದಾರೆ.
ಈ ಸಸಿಗಳಿಂದ ಅಸ್ತಮಾ ಶ್ವಾಸಕೋಶಗಳ ಸಮಸ್ಯೆಗಳು ಸೇರಿದಂತೆ ಇನ್ನಿತರ ಸಮಸ್ಯೆಗಳು ಹುಟ್ಟಿಕೊಂಡು ಕ್ಯಾನ್ಸರ್ ಬರುತ್ತದೆ ಎಂದು ಈಗಾಗಲೇ ಸಾಬೀತಾಗಿದೆ. ಡಿಸಿ ಕಚೇರಿ, ಖಾಸಗಿ ಕಟ್ಟಡಗಳ ಮುಂದೆ, ಹೈದ್ರಾಬಾದ್ ರಸ್ತೆ ವಿಭಾಜಕಗಳಲ್ಲಿ ಸೇರಿದಂತೆ ಸುರಪುರ, ಶಹಾಪೂರ, ವಡಗೇರಿ, ಗುರುಮಠಕಲ್, ಹುಣಸಗಿ ಗಳಲ್ಲಿಯೂ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಶೇ.90 ರಷ್ಟು ಇದೇ ಗಿಡಗಳು ನೆಡುತ್ತಿರುವುದು ಸರಿಯಲ್ಲ ಕೂಡಲೇ ಈ ಕೆಲಸ ಕೈಬಿಡಬೇಕೆಂದು ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ವಿಜಯಕುಮಾರ ಮೊಗದಂಪುರ, ಶಿವರಾಜ ಗುತ್ತೇದಾರ, ನಾಗರಾಜ ರಾಮಸಮುದ್ರ, ಮಾರುತಿ ಮುದ್ನಾಳ, ದೀಪಕ ಪೊದ್ದಾರ, ಅಶೋಕ್ ರೆಡ್ಡಿ ಎಲ್ಲೇರಿ ರಂಗನಾಥ ನಾಯಕ, ಭೀಮಣ್ಣ ಪೂಜಾರಿ, ಸಾಬೆರಡ್ಡಿ, ನಾಗರಡ್ಡಿ, ಸಿದ್ದು ಸಿದ್ಧಿ, ಎಂ.ಡಿ. ಅಮೀರ್, ಮಂಜುನಾಥ ಇನ್ನಿತರರು ಇದ್ದರು.







