ಸುರಪುರ | ವ್ಯಕ್ತಿ ಅನುಮಾನಾಸ್ಪದ ಸಾವು; ಪ್ರಕರಣ ದಾಖಲು

ಸುರಪುರ: ಪಟ್ಟಣದ ನರಸಿಂಗಪೇಟ ಬಳಿ ಕುಂಬಾರಪೇಟ-ಪೇಠ ಅಮ್ಮಾಪುರ ಮುಖ್ಯ ರಸ್ತೆಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದ್ದು, ಸಾವಿನ ಕುರಿತು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ ದೂರು ನೀಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಗುಂಡಕನಾಳ ಗ್ರಾಮದ ಸಿದ್ದಪ್ಪ ಗಸ್ತಿ ಗಾರೆನವಾ (38) ಮೃತಪಟ್ಟ ವ್ಯಕ್ತಿ. ಸಾವಿನ ಕುರಿತು ಮೃತ ವ್ಯಕ್ತಿಯ ತಾಯಿ ಅನುಮಾನ ವ್ಯಕ್ತಪಡಿಸಿ, ನನ್ನ ಮಗನ ಎಡಗಲಿನ ಹೆಬ್ಬೆರಳಿಗೆ ಹೊಟ್ಟೆ ಹಾಗೂ ಬೆನ್ನಿನ ಭಾಗದಲ್ಲಿ ರಕ್ತ ಕಂಡು ಗಟ್ಟಿದ ಗಾಯಗಳಾಗಿವೆ. ಆದ್ದರಿಂದ ಈತನ ಸಾವಿನ ಕುರಿತು ಅನುಮಾನವಿದ್ದು ಸರಿಯಾದ ತನಿಖೆ ನಡೆಸುವಂತೆ ನೀಡಿದ ದೂರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
Next Story




