ಸುರಪುರ | ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ನಲ್ಲಿ ಸುಗ್ಗಿಹಬ್ಬ ಆಚರಣೆ
ಶ್ರೀಮಂತರು ಬಡವರಿಗೆ ಸಹಾಯ ಮಾಡಬೇಕು: ರೆವರೆಂಡ್ ದೇವದಾನ್ ಆನಂದಪ್ಪ

ಸುರಪುರ: ಶ್ರೀಮಂತರು, ಬಡವರು ಎಂಬ ಭೇದಭಾವ ಮಾಡದೆ ಒಬ್ಬರಿಗೊಬ್ಬರು ಸಹಾಯ ಮಾಡಬೇಕು ಎಂದು ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ದೇವದಾನ್ ಆನಂದಪ್ಪ ಹೇಳಿದರು.
ಪಟ್ಟಣದ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ನಲ್ಲಿ ನಡೆದ ಸುಗ್ಗಿಹಬ್ಬದ ಆರಾಧನೆಯಲ್ಲಿ ಮಾತನಾಡಿದ ಅವರು, ಲೋಕದಲ್ಲಿ ಎಲ್ಲರನ್ನೂ ಸಮಾನತೆಯಿಂದ ಕಾಣಬೇಕು. ಶ್ರೀಮಂತರು ಬಡವರಿಗೆ ನೆರವಾಗಬೇಕು ಎಂದು ಹೇಳಿದರು.
ವಿಶೇಷ ಸಂದೇಶ ನೀಡಿದ ಪಿ. ವಿಜಯಕುಮಾರ ಮಾತನಾಡಿ, ದೇವರ ವಾಕ್ಯಗಳಿಂದ ಆತ್ಮಶುದ್ಧೀಕರಣವಾಗುತ್ತದೆ. ದೇವರ ಮುಂದೆ ನಾವು ತಗ್ಗಿಸಿಕೊಂಡಾಗ ಆತನು ನಮ್ಮನ್ನು ಆಶೀರ್ವದಿಸುತ್ತಾನೆ. ಆದ್ದರಿಂದ ನಾವು ವಿನಯಶೀಲರಾಗಿರಬೇಕು. ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿ ತೃಪ್ತಿ ಕಾಣುವವರನ್ನು ದೇವರು ಆಶೀರ್ವದಿಸುತ್ತಾನೆ ಎಂದು ಸುಗ್ಗಿಹಬ್ಬದ ಸಂದೇಶ ನೀಡಿದರು.
ಸುಗ್ಗಿಹಬ್ಬದ ಆರಾಧನೆಯಲ್ಲಿ ವಿಶೇಷ ಹಾಡುಗಳು ಹಾಗೂ ಮಕ್ಕಳಿಂದ ನೃತ್ಯ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಸಭಾಪಾಲಕರಾದ ರೆವರೆಂಡ್ ಸಂತೋಷಕುಮಾರ, ವಿಕ್ಟೋರಿಯಾ ದೇವದಾನ್, ಸುನೀಲಾ ಶಾಂತಕುಮಾರ, ಚಂದ್ರ ಮ್ಯಾಥ್ಯೂ, ಪ್ರಭುಕುಮಾರಿ, ಸೋನಾಸುಕುಮಾರಿ, ಆಲಿಸ್ ಜಾನವೆಸ್ಲಿ, ಸುಮತಿ ವಸಂತ, ಸುಜಾತ ಜಯಪ್ಪ, ಲಲಿತಾ ದೇವಪುತ್ರ, ಸುಕುಮಾರಿ ಇಮ್ಮಾನುವೇಲ್, ಸಾಗರಿಕ, ಅನಿತಾ, ರೆಬೆಕ್ಕ, ಸ್ಟೆಲ್ಲಾ, ಸುನೀತಾ, ಪವಿತ್ರಾ, ರತ್ನಮ್ಮ, ಶಾಲಿನಿ, ಶೋಭಾ, ಸೌಮ್ಯ, ಎಸ್ತರ್ ಸೇರಿದಂತೆ ಮೆಥೋಡಿಸ್ಟ್ ಚರ್ಚ್ನ ಮುಖಂಡರಾದ ಸಾಮುವೇಲ್ ಮ್ಯಾಥ್ಯೂ, ವಸಂತಕುಮಾರ, ಪಾಲನಾಯ್ಕ, ಜಯಪ್ಪ, ಜಾನವೆಸ್ಲಿ, ಅಮಿತ್ ಪಾಲ್, ರಮೇಶ್, ದೇವಪುತ್ರ, ಮಾನುವೆಲರಾಜ್, ಧರ್ಮಣ್ಣ ತಂಗಪಾಂಡೆ, ವಿಜಯಕುಮಾರ, ಇಮಾನುವೆಲ್, ಜಸ್ಟಿನ್ ಜಿಮ್ಮಿ, ಥಾಮಸ್ ಮ್ಯಾಥ್ಯೂ, ನವೀನಕುಮಾರ, ಹನೋಕ್, ಎಲಿಯಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






