ಸುರಪುರ | ಒಬ್ಬ ಕವಿಯ ಕೃತಿ ಮತ್ತೊರ್ವ ಕವಿ ಓದುವುದು ಕಡಿಮೆ : ಡಾ.ಟಿ.ಎಸ್.ಗೊರವರ

ಸುರಪುರ: ಇಂದು ಪುಸ್ತಕಗಳನ್ನು ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಅದರಲ್ಲಿ ಒಬ್ಬ ಕವಿಯ ಕೃತಿ ಮತ್ತೊಬ್ಬ ಕವಿ ಓದುವುದು ಕಡಿಮೆಯಾಗಿದೆ ಎಂದು ಕತೆಗಾರ ಡಾ.ಟಿ.ಎಸ್.ಗೊರವರ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಸುರಪುರ ಹಾಗೂ ಅರುಣ್ ಪ್ರಕಾಶನ ಸುರಪುರ ಇವರುಗಳ ಸಹಯೋಗದಲ್ಲಿ ಸಾಹಿತಿಗಳಾದ ವೆಂಕಟೇಶ ಪಾಟೀಲ್ ಅವರ ಬನದ ಕೋಗಿಲೆಗಳು ಮತ್ತು ಹೆಚ್. ರಾಠೋಡ್ ಅವರ ಎನ್ನೆದೆಯ ಭಾವ ಕುಸುಮಗಳು ಗಜಲ್ ಕೃತಿಗಳ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ, ಡಾ.ಮಲ್ಲಿನಾಥ ಎಸ್.ತಳವಾರ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್, ಹೈಕೋರ್ಟ್ ನ್ಯಾಯವಾದಿ ಜೆ.ಅಗಷ್ಟಿನ್, ಪ್ರಭುಲಿಂಗ ಮಹಾಸ್ವಾಮೀಜಿ, ವೇದಿಕೆಯಲ್ಲಿದ್ದ ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ, ಕೃತಿಗಳ ರಚನೆಕಾರರಾದ ವೆಂಕಟೇಶ ಪಾಟೀಲ, ಹೆಚ್.ರಾಠೋಡ ಅರುಣ್ ಪ್ರಕಾಶನದ ಬೋರಮ್ಮ ಎಸ್.ಯಾಳವಾರ, ಬಿಇಓ ಯಲ್ಲಪ್ಪ ಕಾಡ್ಲೂರ ಹಾಗೂ ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಶರಣಬಸಪ್ಪ ಯಾಳವಾರ ಮಾತನಾಡಿದರು.
ವೇದಿಕೆಯಲ್ಲಿ ಸುರಪುರ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಭಾರ ಪ್ರಾಂಶುಪಾಲ ಬಲಭಿಮ ದೇಸಾಯಿ, ಹುಣಸಗಿ ತಾಲೂಕ ಕಸಾಪ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಉಪಸ್ಥಿತರಿದ್ದರು. ಉಪನ್ಯಾಸಕ ದೇವು ಹೆಬ್ಬಾಳ ನಿರೂಪಿಸಿದರು,ಸಾಹಿತಿ ಕನಕಪ್ಪ ವಾಗಣಗೇರಿ ಸ್ವಾಗತಿಸಿದರು, ಶಿಕ್ಷಕ ರಜಾಕ್ ಬಾಗವಾನ್ ವಂದಿಸಿದರು. ಬಸವರಾಜ ಜಮದ್ರಖಾನಿ, ನಬಿಲಾಲ ಮಕಾಂದಾರ, ಶಿವಕುಮಾರ ಮಸ್ಕಿ, ಶರಣಗೌಡ ಪಾಟೀಲ್, ಮಹಾಂತೇಶ ಗೋನಾಲ, ದೊಡ್ಡ ಮಲ್ಲಿಕಾರ್ಜುನ ಹುದ್ದಾರ, ಶಕುಂತಲಾ ಜಾಲವಾದಿ, ಎ.ಕಮಲಾಕರ,ಪ್ರಕಾಶ ಅಲಬನೂರ,ಪ್ರಕಾಶ ಬಣಗಾರ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
ಈ ವೇಳೆ ಇಬ್ಬರು ಲೇಖಕರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.ಜೊತೆಗೆ ಎರಡು ಕೃತಿಗಳಿಗೆ ಸುರೇಶ ಸಜ್ಜನ್ 5 ಸಾವಿರ ರೂ. ಪ್ರೋತ್ಸಾಹ ಧನ ನೀಡಿ ಹಾಗೂ ಜೆ.ಅಗಷ್ಟಿನ್ ತಲಾ ಕೃತಿಗೆ 5 ನೂರು ರೂ. ನೀಡಿ ಖರಿದಿ ಮಾಡುವ ಮೂಲಕ ಪ್ರೋತ್ಸಾಹಿಸಿದರು.
ಸುರಪುರದ ಎಲ್ಲಾ ಪ್ರಕಾರದ ಸಾಹಿತಿಗಳು, ಲೇಖಕರು ಹಾಗೂ ಬರಹಗಾರರು ಸೇರಿ ಒಂದು ಲೇಖಕರ ಸಂಘ ಸಹಕಾರ ಸಂಘ ರಚನೆ ಮಾಡಿಕೊಂಡು ಒಂದಿಷ್ಟು ವಂತಿಗೆ ಸಂಗ್ರಹಿಸುವ ಮೂಲಕ ಎಲ್ಲ ಸಾಹಿತಿಗಳ ಕೃತಿಗಳನ್ನು ಪ್ರಕಟಿಸಲು ಮುಂದಾಗಬೇಕು.
- ಶ್ರೀನಿವಾಸ ಜಾಲವಾದಿ ಗಮಕ ಕಲಾ ಪರಿಷತ್ ಜಿಲ್ಲಾಧ್ಯಕ್ಷ







