ಸುರಪುರ | ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಿ : ರಾಜುಗೌಡ

ಸುರಪುರ: ರಾಜ್ಯ ಸರ್ಕಾರ ನಾಡಿನ ಅಭಿವೃದ್ಧಿ ಹಾಗೂ ರೈತರನ್ನು ಸಂಪೂರ್ಣವಾಗಿ ಮರೆತಿದೆ. ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಮಾಡಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಹೇಳಿದರು.
ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ನಡೆದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಸರ್ಕಾರ ಕೇವಲ ಗ್ಯಾರಂಟಿಗಳ ಹೆಸರನ್ನು ಹೇಳುವುದನ್ನು ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ ಎಂದು ಆರೋಪಿಸಿದರು.
ರೈತರು ಬರಗಾಲದಿಂದ ತೀವ್ರ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ಸೂಕ್ತ ಪರಿಹಾರ ನೀಡಲು ಮುಂದಾಗಬೇಕಿದ್ದ ಸರ್ಕಾರ, ಕೇವಲ 2,500 ರೂ. ನೀಡುವುದಾಗಿ ಹೇಳುವ ಮೂಲಕ ರೈತ ವಿರೋಧಿ ಸರ್ಕಾರ ಎಂಬುದನ್ನು ತೋರಿಸುತ್ತಿದೆ ಎಂದು ಟೀಕಿಸಿದರು.
ಸರ್ಕಾರದ ಇಂತಹ ಜನವಿರೋಧಿ ನೀತಿಗಳನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯನ್ನು ಬೇರುಮಟ್ಟದಿಂದ ಬಲಪಡಿಸಬೇಕಿದೆ. ಈ ನಿಟ್ಟಿನಲ್ಲಿ ಪಕ್ಷದ ಎಲ್ಲ ಮುಖಂಡರು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳ ಮಾಜಿ ಸದಸ್ಯರು ಜನರ ಬಳಿಗೆ ತೆರಳಿ ಜಾಗೃತಿ ಮೂಡಿಸಬೇಕು. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಪಕ್ಷ ಸಂಘಟನೆಯ ಮೂಲಕ ಸಜ್ಜಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ),ತಾ.ಪಂ ಮಾಜಿ ಅಧ್ಯಕ್ಷ ದೊಡ್ಡ ಕೊತಲೆಪ್ಪ ಹಾವಿನ್,, ಬಲಭಿಮನಾಯಕ ಬೈರಿಮಡ್ಡಿ ,ನಿಂಗಯ್ಯ ಪೂಜಾರಿ,ಮಲ್ಲಣ್ಣ ಸಾಹುಕಾರ,ಶರಣು ನಾಯಕ ಬೈರಿಮಡ್ಡಿ, ಭೀಮಣ್ಣ ಬೇವಿನಾಳ, ವೆಂಕಟೇಶ ನಾಯಕ ಬೈರಿಮಡ್ಡಿ, ಸಣ್ಣ ದೇಸಾಯಿ ದೇವರಗೋನಾಲ, ದೇವಿಂದ್ರಪ್ಪಗೌಡ ದೇವರಗೋನಾಲ, ನಾನೇಗೌಡ ದೇವರಗೋನಾಲ, ಹಣಮಂತ್ರಾಯ ಪೂಜಾರಿ ದೇವರಗೋನಾಲ, ಪ್ರವೀಣ ನಾಯಕ ಡೊಣ್ಣಿಗೇರಾ, ಮಲ್ಲು ದಂಡಿನ, ಮಲ್ಕಣ ದೇವಿಕೇರಾ, ಆನಂದ ಗುಡ್ಡಕಾಯಿ, ಮಲ್ಲನಗೌಡ ದೇವಿಕೇರಾ, ಮಾಳಪ್ಪ ರತ್ತಾಳ, ಲಕ್ಷ್ಮೀಕಾಂತ ದೇವರಗೋನಾಲ, ಶಂಕರ ನಾಯಕ, ಶ್ರೀನಿವಾಸ ನಾಯಕ ದರಬಾರಿ ಸೇರಿದಂತೆ ದೇವರಗೋನಾಲ ಗ್ರಾ.ಪಂ ಹಾಗೂ ದೇವಿಕೇರಿ ಗ್ರಾ.ಪಂ ಮತ್ತು ಬಾದ್ಯಾಪುರ ಗ್ರಾಮಗಳ ಹಿರಿಯ ಮುಖಂಡರು ಹಾಗೂ ಬಿಜೆಪಿ ನೂರಾರು ಜನ ಕಾರ್ಯಕರ್ತರು ಭಾಗವಹಿಸಿದ್ದರು.
ಪಕ್ಷ ಸಂಘಟನೆಯ ಅಂಗವಾಗಿ ಹೇಮನೂರ ಹಾಗೂ ಅರಕೇರಾ ಕೆ. ಗ್ರಾಮಗಳಲ್ಲಿಯೂ ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಅವರು ಸಭೆ ನಡೆಸಿ, ಪಕ್ಷ ಸಂಘಟನೆ ಬಲಪಡಿಸುವ ಜೊತೆಗೆ ಮುಂಬರುವ ಚುನಾವಣೆಗಳಿಗೆ ಸಿದ್ಧತೆ ನಡೆಸುವಂತೆ ಮುಖಂಡರಿಗೆ ಕರೆ ನೀಡಿದರು. ಸಭೆಯಲ್ಲಿ ವಿರುಪಾಕ್ಷಿ ಕರ್ನಾಳ, ಮಹೇಶ ಪಾಟೀಲ, ದೇವರಾಜ ಮಕಾಶಿ, ತಾತಾರಡ್ಡಿ ದೇಸಾಯಿ, ಹಣಮಂತ್ರಾಯ ಲಕ್ಷ್ಮೀಪುರ, ನಿಂಗಪ್ಪ ಸೋಲಾರ, ಭೀಮಣ್ಣ ಹಾಲಗೇರಿ, ಸಣ್ಣ ದೇವರಾಜ ಮಕಾಶಿ, ರಾಘವೇಂದ್ರ ಸಗರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






