ಸುರಪುರ | ಸಂಭ್ರಮದ ಈದುಲ್ ಫಿತ್ರ್ ಆಚರಣೆ

ಸುರಪುರ : ಪಟ್ಟಣದ ಝಂಡದಕೇರಾ ದಲ್ಲಿನ ಈದ್ಗಾ ಮೈದಾನದಲ್ಲಿ ಈದುಲ್ ಫಿತ್ರ್ ಹಬ್ಬದ ಅಂಗವಾಗಿ ಸಾವಿರಾರು ಮುಸ್ಲಿಂ ಬಾಂಧವರು ಪ್ರಾರ್ಥನೆಯಲ್ಲಿ ಭಾಗವಹಿಸಲು ವಿವಿಧ ಮಸೀದಿಗಳಿಂದ ಹಾಗೂ ಸುತ್ತಲಿನ ಗ್ರಾಮಗಳಿಂದ ಭಾಗವಹಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೌಲ್ವಿ ಹಾಫೀಸ್ ಅಕ್ಬರ್ ಅಲಿ ಗೋಗಿ ಅವರು ಪ್ರಾರ್ಥನೆಯನ್ನು ನೆರವೇರಿಸಿ ಮಾತನಾಡಿ, ರಮಝಾನ್ ಮಾಸವು ಉಪವಾಸದ ಮೂಲಕ ಮನುಷ್ಯನಲ್ಲಿ ತಾಳ್ಮೆ ಹಾಗೂ ಸಂಯಮ ಕಲಿಸಿಕೊಡುತ್ತದೆ. ಉಪವಾಸ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿಗೆ ಪ್ರೇರಣೆಯಾಗುತ್ತದೆ ಎಂದರು.
ನಂತರ ಎಲ್ಲರು ಪರಸ್ಪರ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡು ಧನ ದಾನ ಮಾಡುವ ಮೂಲಕ ರಮಝಾನ್ ಆಚರಿಸಿದರು.
ಪ್ರಾರ್ಥನೆಯಲ್ಲಿ ಪ್ರಮುಖರಾದ, ಸೈಯದ್ ಅಹ್ಮದ್ ಪಾಷಾ ಖಾದ್ರಿ, ಈದ್ಗಾ ಕಮಿಟಿ ಅಧ್ಯಕ್ಷರಾದ ಎ.ಆರ್ ಪಾಷಾ, ಅಹಮದ್ ಪಠಾಣ್, ಖಾಜಾ ಖಲೀಲ ಅಹ್ಮದ್ ಅರಕೇರಿ,ಉಸ್ತಾದ್ ವಜಾಹತ್ ಹುಸೇನ್,ಲಿಯಾಖತ್ ಹುಸೇನ್, ಉಸ್ತಾದ್ ಅಬ್ದುಲ್ ಮುಲ್ಲಾ ,ತೌಫಿಕ್ ಅಹಮದ್ ಅರಕೇರಿ, ಮೆಹಬೂಬ್ ಸಾಬ್ ಜಮಾದಾರ್,ಅನ್ವರ್ ಜಮಾದಾರ್,ಆರ್. ಕೆ.ಕೋಡಿಹಾಳ, ಖಾದರ್ ಪಟೇಲ್, ಇಮ್ತಿಯಾಜ್ ಹುಸೇನ್, ಕಲ್ಲಿಮುದ್ದೀನ್ ಫರೀದಿ, ಅಬೂಬಕರ್ ಬೇಗ್, ಖಾಜಾ ನಿಜಾಮುದ್ದೀನ್ ,ಮೊಹಮ್ಮದ್ ಆರಿಫ್, ಅರ್ಷದ್ ಎಂ.ಡಿ ಗೌಸ್, ಇರ್ಫಾನ್ ಮೌಲಾಲಿ ಸೌದಾಗರ್, ಖಾಜಾ ಹುಸೇನ್ ಗುಡುಗುಂಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪಟ್ಟಣದ ಹಸನಾಪುರದ ಈದ್ಗಾ ಮೈದಾನದಲ್ಲಿ ರಂಗಂಪೇಟೆಯ ಸಾವಿರಾರು ಜನ ಮುಸ್ಲಿಂ ಬಾಂಧವರು ಭಾಗವಹಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಈದುಲ್ ಫಿತ್ರ್ ಹಬ್ಬ ಆಚರಿಸಿದರು. ಈ ಸಂದರ್ಭದಲ್ಲಿ ಮೌಲ್ವಿ ಖದೀರ್ ಸಾಬ್ ಅವರು ಎಲ್ಲರಿಗೂ ಖುರಾನ್ ಬೋಧಿಸಿ ನಂತರ ರಂಜಾನ್ ಹಬ್ಬದ ಮಹತ್ವ ತಿಳಿಸಿದರು. ಸಾವಿರಾರು ಜನ ಭಾಗವಹಿಸಿದ್ದರು.







