ಸುರಪುರ | ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ಕಾನೂನು ಅರಿವು ನೆರವು ಕಾರ್ಯಕ್ರಮ

ಸುರಪುರ: ಮನುಷ್ಯ ತಿಳಿದೊ ತಿಳಿಯದೆ ತಪ್ಪು ಮಾಡುತ್ತಾರೆ, ಆದರೆ ಮಾನಸಿಕವಾಗಿ ಸದೃಢರಾಗಿದ್ದು ಸಮಾಧಾನದಿಂದ ಯೋಚಿಸಿ ತಪ್ಪು ಮಾಡದಂತೆ ಎಚ್ಚರವಹಿಸಬೇಕು ಎಂದು ಸುರಪುರ ಪೀಠದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಯಮನಪ್ಪ ಬಮ್ಮಣಗಿ ತಿಳಿಸಿದರು.
ಪಟ್ಟಣದ ಉಪ ಕಾರಾಗೃಹದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಉಪ ಕಾರಾಗೃಹ ಸುರಪುರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ದಿನಾಚರಣೆಯ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ
, ಪ್ರತಿಯೊಬ್ಬ ಮನುಷ್ಯನಿಗೆ ಮಾನಸಿಕ ಆರೋಗ್ಯ ತುಂಬಾ ಮುಖ್ಯವಾಗಿದೆ ಇದರಿಂದ ಎಷ್ಟೋ ಅಪರಾಧ ಅಪಘಾತಗಳನ್ನು ತಪ್ಪಿಸಲು ಸಾಧ್ಯವಿದೆ. ಯಾವುದೇ ಮನುಷ್ಯ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಾಗ ತಪ್ಪು ಮಾಡುತ್ತಾನೆ ಆದರೆ ಸಮಾಧಾನದಿಂದ ಯೋಚಿಸುವುದರಿಂದ ತಪ್ಪು ಮಾಡುವುದನ್ನು ತಡೆಯಲು ಸಾಧ್ಯವಿದೆ ಇಲ್ಲಿರುವ ಎಲ್ಲಾ ಕೈದಿಗಳು ಕೂಡ ಹೊರಗೆ ಹೋದ ನಂತರದಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಜೀವನ ನಡೆಸುವಂತೆ ಸಲಹೆ ನೀಡಿದರು.
ಉಪನ್ಯಾಸಕರಾಗಿ ಭಾಗವಹಿಸಿದ್ದ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ಚಿಕಿತ್ಸೆ ಮನೋಶಾಸ್ತ್ರ ತಜ್ಞರಾದ ಮಲ್ಲಿಕಾರ್ಜುನ ಮ್ಯಾಗೇರಿ, ವಕೀಲರಾದ ಜ್ಯೋತಿ ಎಲ್ ನಾಯಕ ಕಾರ್ಯಕ್ರಮದ ಕುರಿತು ಮಾತನಾಡಿ, ಇಂದಿನ ಒತ್ತಡದ ಬದುಕಿನಲ್ಲಿ ಮನುಷ್ಯ ಬೇಗ ಮಾನಸಿಕ ಕುಗ್ಗುವಿಕೆಗೆ ಒಳಗಾಗುತ್ತಾನೆ, ಇದಕ್ಕಾಗಿ ಪ್ರತಿಯೊಬ್ಬರೂ ಯೋಗಾಧ್ಯಾನ ಉತ್ತಮ ಆಹಾರ ಸೇವನೆ ತುಂಬಾ ಮುಖ್ಯವಾಗಿದೆ. ಅಲ್ಲದೆ ಅಗತ್ಯವಿದ್ದಾಗ ಮಾನಸಿಕ ತಜ್ಞರನ್ನು ಕೂಡ ಭೇಟಿ ಮಾಡುವುದು ಅವಶ್ಯಕ ಎಂದರೆ. ಅಲ್ಲದೆ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಮನುಷ್ಯ ತಪ್ಪು ಮಾಡುತ್ತಾನೆ ಇದರಿಂದಾಗಿ ಕಾನೂನಿನ ನಡೆ ಶಿಕ್ಷೆಯನ್ನು ಕೂಡ ಅನುಭವಿಸಬೇಕಾಗುತ್ತದೆ. ಆದ್ದರಿಂದ ಕಾನೂನುಗಳ ಬಗ್ಗೆಯೂ ಎಲ್ಲರಿಗೂ ಎಚ್ಚರಿಕೆ ಮತ್ತು ಜಾಗೃತಿ ಅಗತ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಮುದುಕಪ್ಪ ಓದನ, ತಾಲೂಕ ಆರೋಗ್ಯ ಅಧಿಕಾರಿ ಡಾ. ರಾಜಾ ವೆಂಕಪ್ಪ ನಾಯಕ, ಪಿಎಸ್ಐ ಕೃಷ್ಣ ಸುಬೇದಾರ್, ವಕೀಲರ ಸಂಘದ ಅಧ್ಯಕ್ಷ ಬಸವರಾಜ ಅನಸೂರ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪಕಾರ ಗ್ರಹದ ಅಧೀಕ್ಷಕ ಸಾಗರ ಪಾಟೀಲ ಮಾತನಾಡಿದರು.
ವೇದಿಕೆಯಲ್ಲಿ ಹಿರಿಯ ವಕೀಲ ಮಲ್ಲಿಕಾರ್ಜುನ ಟೀಮ್ ಅಂಗಿಗಳ ಉಪಸ್ಥಿತರಿದ್ದರು ವಕೀಲ ಸಂತೋಷ ಕುಮಾರ ಗಾರಂಪಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ನ್ಯಾಯಾಂಗ ಇಲಾಖೆ ಸಿಬ್ಬಂದಿ ಭೀಮು ಬನಸೋಡೆ ಸೇರಿದಂತೆ ನ್ಯಾಯಾಲಯದ ಮತ್ತು ಉಪ ಕಾರಾಗೃಹ ಸಿಬ್ಬಂದಿ ಉಪಸ್ಥಿತರಿದ್ದರು.






