ಸುರಪುರ | ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ

ಸುರಪುರ: ತಾಲೂಕಿನ ಕಕ್ಕೇರಾ ಪಟ್ಟಣದಲ್ಲಿ ವಿಕಲಚೇತನರಿಗೆ ತ್ರಿಚಕ್ರ ವಾಹನಗಳ ವಿತರಣೆ ಕಾರ್ಯಕ್ರಮವನ್ನು ನಡೆಸಲಾಯಿತು.
ತ್ರಿಚಕ್ರ ವಾಹನಗಳ ವಿತರಿಸಿದ ಶಾಸಕ ರಾಜಾ ವೇಣುಗೋಪಾಲ ನಾಯಕ ಮಾತನಾಡಿ, ಅಂಗವಿಕಲತೆ ಎನ್ನುವುದು ಯಾವುದೇ ಶಾಪವಲ್ಲ. ಅನೇಕ ಜನ ವಿಕಲಚೇತನರು ಜಗತ್ತು ಬೆರಗಾಗಿ ನೋಡುವಂತ ಸಾಧನೆಯನ್ನು ಮಾಡಿದ್ದಾರೆ. ಕ್ರೀಡೆಗಳಲ್ಲಿ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲೂ ಕೂಡ ತಮ್ಮ ಛಾಪನ್ನು ಮೂಡಿಸಿದ್ದಾರೆ. ಶೈಕ್ಷಣಿಕ ರಂಗದಲ್ಲಿ ದೊಡ್ಡ ಸಾಧನೆಯನ್ನು ಮಾಡಿದ್ದಾರೆ ಜೊತೆಗೆ ಉನ್ನತ ಹುದ್ದೆಗಳಲ್ಲೂ ಕೂಡ ವೀಕಲಚೇತನರು ಕರ್ತವ್ಯ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ತ್ರಿಚಕ್ರ ವಾಹನವನ್ನು ಪಡೆಯುತ್ತಿರುವ ವಿಕಲಚೇತನರು ಇವುಗಳ ಸದುಪಯೋಗ ಮಾಡಿಕೊಂಡು ಬದುಕಿನಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಮೂರು ಜನ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಪರಮಣ್ಣ ಕಮತಗಿ, ಉಪಾಧ್ಯಕ್ಷ ಜಟ್ಟೆಪ್ಪ, ಮುಖಂಡರಾದ ಮಾಜಿ ಜಿ.ಪಂ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್, ವೆಂಕೋಬ ಯಾದವ್, ಗುಂಡಪ್ಪ ಸೋಲಾಪುರ, ಮಲ್ಲಣ್ಣ ಸಾಹುಕಾರ ಮುಧೋಳ ನರಸಿಂಗಪೇಟ, ಅಬ್ದುಲ್ ಗಫರ್ ನಗನೂರಿ,ಶರಣು ಸಾಲಾಪುರ, ಬುಚ್ಚಪ್ಪ ನಾಯಕ,ಸೋಮನಾಥ ಸೋಲಾಪುರ,ಸೋಮಣ್ಣ ದೊರೆ ಹಾಗೂ ಪುರಸಭೆ ಮುಖ್ಯಾಧಿಕಾರಿ ಮಾನಪ್ಪ ಗೋನಾಲ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.






