ಸುರಪುರ | ರುಕ್ಮಾಪುರ ಡೆಕೋರೇಷನ್ ಮಾಲಕರ ಕ್ಷೇಮಾಭಿವೃದ್ಧಿ ಸಂಘದ ಸಭೆ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಜಿಹ್ವೇಶ್ವರ ಕಲ್ಯಾಣ ಮಂಟಪದಲ್ಲಿ ಶಾಮಿಯಾನ ಸಪ್ಲೇಯರ್ಸ್, ಲೈಟಿಂಗ್ ಧ್ವನಿವರ್ಧಕ ಹಾಗೂ ಡೆಕೋರೇಷನ್ ಮಾಲಕರ ಕ್ಷೇಮಾಭಿವೃದ್ದಿ ಸಂಘದ ನೂತನ ಪದಾಧಿಕಾರಿಗಳ ನೇಮಕ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ 2024-25ನೇ ಸಾಲಿನ ಲೆಕ್ಕ ಪತ್ರ ಮಂಡನೆಯನ್ನು ನೆರವೇರಿಸಲಾಯಿತು.
ಪದಾಧಿಕಾರಿಗಳು:
ಅಧ್ಯಕ್ಷರಾಗಿ -ಬಸವರಾಜ ಕೋಳೂರು, ಗೌರವ ಅಧ್ಯಕ್ಷರಾಗಿ - ಮುಹಮ್ ದ್ ರಫೀಕ್, ಉಪಾಧ್ಯಕ್ಷರಾಗಿ - ಚಂದ್ರಶೇಖರ್ ಶೀಲವಂತ, ಕಾರ್ಯದರ್ಶಿಯಾಗಿ - ಸೈಯದ್ ಅನ್ವರ್, ಸಹ ಕಾರ್ಯದರ್ಶಿಯಾಗಿ - ಶಿವು ಖಾದ್ರಿ , ಖಜಾಂಚಿಯಾಗಿ - ನಾರಾಯಣ ಧನ್ವಾಡ್ , ಸಂಘಟನಾ ಕಾರ್ಯದರ್ಶಿಯಾಗಿ-ಶ್ರೀಶೈಲ ಸಜ್ಜನ, ಆನಂದ ಕುಮಾರ್ ಬಿ.ಗೋಗಿ ಇವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಲಕ್ಷ್ಮಣ ಬುದ್ದಿನ್, ತಿಪ್ಪಣ್ಣ ಮಡಿವಾಳ, ಮೊನಾಥನ್ ಶಾಸ್ತ್ರಿ, ಶ್ರೀಶೈಲ್ ಬಳಿಗಾರ, ಮಾಸ್ಟರ್ ಸೋಯಲ್, ಬಸವರಾಜ್ , ಸಂಗಮೇಶ ಗುಳಿಗೆ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Next Story





