ಸುರಪುರ | ಟಿಪ್ಪು ಸುಲ್ತಾನ್ ಅಪ್ರತಿಮ ದೇಶಪ್ರೇಮಿ : ಶ್ರೀನಿವಾಸ್ ನಾಯಕ್

ಸುರಪುರ: ಟಿಪ್ಪು ಸುಲ್ತಾನ್ ಕೇವಲ ಅರಸನಾಗಿರದೆ, ಒಬ್ಬ ಅಪ್ರತಿಮ ದೇಶಪ್ರೇಮಿಯಾಗಿದ್ದ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ ಕೃಷ್ಣಪ್ಪ ಬಣದ ಜಿಲ್ಲಾ ಸಂಚಾಲಕ ಶ್ರೀನಿವಾಸ್ ನಾಯಕ್ ಬೊಮ್ಮನಹಳ್ಳಿ ಹೇಳಿದರು.
ನಗರದ ಟಿಪ್ಪು ಸುಲ್ತಾನ್ ವೃತದಲ್ಲಿ ನಡೆದ ಟಿಪ್ಪು ಸುಲ್ತಾನ್ ಅವರ 276ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀನಿವಾಸ್ ನಾಯಕ್, ಟಿಪ್ಪು ಸುಲ್ತಾನ್ ನಾಡ ಪ್ರೇಮಿಯಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಅಪ್ರತಿಮ ಹೋರಾಟಗಾರ. ಆದ್ದರಿಂದ ಅವರನ್ನು ಮೈಸೂರಿನ ಹುಲಿ ಎಂದು ಕರೆಯಲಾಗಿದೆ. ಇಂದು ಅವರ ಜಯಂತಿಯನ್ನು ಎಲ್ಲರೂ ಸೇರಿ ಆಚರಣೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್ ಸಮಾಜ ಸೇವಾ ಸಂಘದ ಅಧ್ಯಕ್ಷ ಖಾಜಾ ಖಲೀಲ್ ಅಹಮದ್ ಅರಕೇರಿ, ನಗರಸಭೆ ಸದಸ್ಯ ನಾಸಿರ್ ಕುಂಡಾಲೆ, ಮಹಮ್ಮದ್ ಗೌಸ್ ಕಿಣ್ಣಿ, ಶಕೀಲ್ ಅಹಮದ್, ತೋಫಿಕ್ ಅರಕೇರಿ, ಮಹಾದೇವಪ್ಪ ಬೊಮ್ಮನಹಳ್ಳಿ, ರಾಜು ಶಖಾಪುರ, ಅಬೀದ್ ಹುಸೇನ್ ಪಗಡಿ, ಎಂ ಪಟೇಲ್, ಖಾಜಾ ಅಜ್ಮೀರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Next Story





