ನಿಜಶರಣ ಅಂಬಿಗರ ಚೌಡಯ್ಯನವರ ತತ್ವ ಆದರ್ಶ ಪ್ರತಿಯೊಬ್ಬರು ಪಾಲಿಸಬೇಕು: ಉಮೇಶ ಕೆ. ಮುದ್ನಾಳ್ ಕರೆ

ಯಾದಗಿರಿ: ಶ್ರೀನಿಜಶರಣ ಶರಣ ಅಂಬಿಗರ ಚೌಡಯ್ಯ ನವರು ಕೋಲಿ ಸಮಾಜಕ್ಕೆ ಸೀಮಿತವಲ್ಲ. ಸರ್ವ ಸಮಾಜದ ಶರಣರು ಅದಕ್ಕಾಗಿ ಅವರ ತತ್ವ ಆದರ್ಶಗಳು ಮತ್ತು ವಚನಗಳು ನಾವೆಲ್ಲರೂ ದಿನನಿತ್ಯ ಪಾಲಿಸಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಹೇಳಿದರು.
ಯಾದಗಿರಿ ತಾಲೂಕಿನ ಸೈದಾಪೂರ ಸಮೀಪ ಇರುವ ಬಾಡಿಯಾಲ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ಸೋಮವಾರ ಬೆಳಿಗ್ಗೆ ನಿಜಶರಣ ಅಂಬಿಗರ ಚೌಡಯ್ಯನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, 12ನೇ ಮಾಸದಲ್ಲಿ ಶ್ರಾವಣ ಮಾಸ ಶ್ರೇಷ್ಠ. ಹಾಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರಾವಣ ಮಾಸದಲ್ಲಿ ಒಂದು ತಿಂಗಳವರೆಗೆ ನಿರಂತರವಾಗಿ ವಿಶೇಷ ಪೂಜೆ ಅಭಿಯಾನ ಕಾರ್ಯಕ್ರಮ ನಡೆಯುತ್ತಿದ್ದು, ಸಮಾಜದ ಬಾಂಧವರು ಈ ಅಭಿಯಾನದಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಈ ಕಾರ್ಯಕ್ರಮ ಯಶಸ್ವಿಗೆ ಪಾತ್ರರಾಗಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿಶ್ವನಾಥ್ ಗಂಟೆ, ತಿಪ್ಪಣ್ಣ ಗಡದ್, ಮಲ್ಲೇಶಿ, ಜಗದೀಶ, ಮಲ್ಲಪ್ಪ, ಗೋವಿಂದ ತಿಮೋಜಿ, ಸೂಗರಪ್ಪ ಬೋಯಿನ್, ಚಂದ್ರು, ಮರಿಯಪ್ಪ ಮತ್ತಲ್, ಗಣಪುರ್, ಶಿವು ಬೋಯಿನ್, ಬಸವರಾಜ್ ಕವಲಿ, ಬಸವರಾಜ್ ಕೊತ್ತಪಲ್ಲಿ, ಭೀಮು ತಿಮೋಜಿ, ಚನ್ನು ಕವಳೂರ್, ನಿಂಗಪ್ಪ ಕಡೆಚೂರ್, ದೇವಪ್ಪ ಗಟ್ಟಿಗೂರ್, ಯಂಕಪ್ಪ ಚಂದಾಪುರ್, ರಾಮಣ್ಣ ಅಂಗಡಿ, ಬಸವರಾಜ ಕಾವಲಿ, ಮಲ್ಲು ಕವಲೂರ್, ಬನ್ನಪ್ಪ ತಿಮೋಜಿ, ಕರಿಯಪ್ಪ ಘಂಟಿ, ಮಹದೇವ ಗಾಡದ್, ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.






